Advertisement
ಸುಳ್ಯದ ಭಜನಾ ಮಂದಿರದಲ್ಲಿ ಕಾಸರಗೋಡಿನ ವಾಸುದೇವ ಆಚಾರ್ಯರ ಬಳಿ ವಯಲಿನ್ ಕಲಿಕೆ ಆರಂಭಿಸಿದ ಇವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ತಮಿಳುನಾಡಿನ ಖ್ಯಾತ ವಯಲಿನ್ ವಾದಕಿ, ಸಂಗೀತ ಕಲಾನಿಧಿ, ಕಲೈಮಾಮಣಿ, ಪದ್ಮಶ್ರೀ ಎ. ಕನ್ಯಾಕುಮಾರಿಯವರ ಶಿಷ್ಯರಾಗಿ ಕಲಿಕೆ ಮುಂದುವರಿಸುವ ಬಯಕೆ ಹೊಂದಿದ್ದರು. ತನ್ನ ಮನೋಭಿಲಾಷೆಯನ್ನು ಆತ್ಮೀಯರಾದ ಸುಳ್ಯದ ಪುರೋಹಿತ ನಟರಾಜ್ ಶರ್ಮರಲ್ಲಿ ಹೇಳಿಕೊಂಡಾಗ, ಕನ್ಯಾಕುಮಾರಿಯವರನ್ನು ಸಂಪರ್ಕಿಸಿ ಅವರ ಶಿಷ್ಯರಾಗಿ ಚೆನ್ನೈಯಲ್ಲಿ ನೆಲೆಸುವುದಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ ಅವರು ಮಾಡಿಕೊಟ್ಟಿದ್ದರು. ಆ ಬಳಿಕ ತನ್ನ ಸಾಧನಾ ಪಥದಲ್ಲಿ ಹಿಂದಿರುಗಿ ನೋಡದ ರಾಜೇಶ್ ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದಾರೆ. ಇದೀಗ ಹೆಸರಾಂತ ಕಲಾವಿದರ ಕಛೇರಿಗಳಲ್ಲಿ ಪಕ್ಕವಾದ್ಯ ಕಲಾವಿದನಾಗಿ ವಯಲಿನ್ ನುಡಿಸುವುದರ ಜತೆಗೆ ನೂರಾರು ಮಂದಿ ಶಿಷ್ಯ ವರ್ಗಕ್ಕೆ ವಯಲಿನ್ ತರಗತಿ ನಡೆಸಿಕೊಡುತ್ತಿ¨ªಾರೆ. ಪ್ರಸ್ತುತ ಚೆನ್ನೈಯಲ್ಲಿ 60 ಮಂದಿ ವಿದ್ಯಾರ್ಥಿಗಳು ಇವರಿಂದ ವಯಲಿನ್ ತರಬೇತಿ ಪಡೆಯುತ್ತಿ¨ªಾರೆ. ಚೆನ್ನೈ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಕೂಡ ತಮ್ಮ ಶಿಷ್ಯರÇÉೊಬ್ಬರು ಅನ್ನುವ ಹೆಗ್ಗಳಿಕೆ ಇವರದ್ದು! ಇದರ ಜತೆಗೆ ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕವೂ ತರಗತಿ ನಡೆಸಿಕೊಡುತ್ತಿ¨ªಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ 10 ಮಂದಿ, ಅಬುಧಾಬಿಯ ಮೂವರು, ಸ್ವಿಟ್ಜರ್ಲೆಂಡ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಇವರಿಂದ ವಯಲಿನ್ ಕಲಿಯುತ್ತಿದ್ದು ಇವರ ಪೈಕಿ ಇಬ್ಬರು ಶಿಷ್ಯರು ಅಮೆರಿಕದ ಕ್ಲೀವ್ ಲ್ಯಾಂಡ್ ಸಂಗೀತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಹಾಗೂ ಇನ್ನೊಬ್ಬ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮೂವರು ವಿದ್ಯಾರ್ಥಿಗಳು ಕೇಂದ್ರ ಸರಕಾರದಿಂದ ಸಿಸಿಆರ್‌ಟಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಗಳಿಸಿರುತ್ತಾರೆ. ಚೆನ್ನೈಯ ವಿದ್ಯಾರ್ಥಿಗಳು ಕೂಡ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಅಂತರ್ಜಾಲ ತರಗತಿಗೆ ಮತ್ತಷ್ಟು ಬೇಡಿಕೆ ಬರುತ್ತಿದ್ದು ಸಮಯದ ಅಭಾವದಿಂದ ಎಲ್ಲರ ಬೇಡಿಕೆಗಳನ್ನು ರಾಜೇಶ್ ಅವರಿಗೆ ಪೂರೈಸಲಾಗುತ್ತಿಲ್ಲ.
ಇವರ ಸಂಗೀತ ಸಾಧನೆಯನ್ನು ಮೆಚ್ಚಿ ಆಲ್ ಇಂಡಿಯಾ ರೇಡಿಯೋದಿಂದ ಬಿ ಗ್ರೇಡ್ ಮಾನ್ಯತೆ ಸಿಕ್ಕಿದೆ, ಕಂಚಿ ಕಾಮಕೋಟಿ ಪೀಠದಿಂದ ಆಸ್ಥಾನ ವಿದ್ವಾನ್ ಗೌರವ ಲಭಿಸಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನಲ್ಲಿ ನಡೆದ ಕೊಂಕಣಿ ಯುವಜನೋತ್ಸವ ಸಮಾರಂಭದಲ್ಲಿ ವಿಶೇಷವಾಗಿ ಸಮ್ಮಾನಿತರಾಗಿ¨ªಾರೆ.
Related Articles
Advertisement
ಉದಯ ಭಾಸ್ಕರ್, ಸುಳ್ಯ