Advertisement

ಬಂಧನದಲ್ಲಿದ್ದಾಗ ಹಿಂಸೆ: ಸಾಧ್ವಿ ಪ್ರಜ್ಞಾ ಆರೋಪ

05:46 AM Apr 19, 2019 | Team Udayavani |

ಭಯೋತ್ಪಾದನೆ ಹೆಸರಿನಲ್ಲಿ ತಮ್ಮನ್ನು ಬಂಧಿಸಿದ ಮೊದಲ ದಿನವೇ ತಮ್ಮನ್ನು ಪೊಲೀಸರು ಬೆಲ್ಟ್‌ಗಳಿಂದ ತಮ್ಮನ್ನು ಥಳಿಸಿದ್ದಾಗಿ, ಭೋಪಾಲ್‌ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಆರೋಪಿಸಿದ್ದಾರೆ. ಗುರುವಾರ, ಭೋಪಾಲ್‌ ಕ್ಷೇತ್ರದಲ್ಲಿ ತಮ್ಮ ಪ್ರಚಾರ ಆರಂಭಿಸಿದ ಅವರು, ತಮ್ಮ ಮೊದಲ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Advertisement

2008ರಲ್ಲಿ ನಡೆದಿದ್ದ ಮಾಲೆಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸಿದ್ದಾಗ ತಾವು ಅನುಭವಿಸಿದ ಸನ್ನಿವೇಶಗಳನ್ನು ರ್ಯಾಲಿಯಲ್ಲಿ ವಿವರಿಸುವಾಗ ಸಾಧ್ವಿ ಕಣ್ಣೀರು ಹಾಕಿದರು. “ಬಂಧನವಾಗಿ 24 ಗಂಟೆಯವರೆಗೂ ನನಗೆ ಊಟ, ನೀರನ್ನೂ ನೀಡಿರಲಿಲ್ಲ. ಮಾಲೆಗಾಂವ್‌ ಸ್ಫೋಟದಲ್ಲಿ ಭಾಗಿಯಾಗಿದ್ದೇನೆ ಎಂದು ಬಲವಂತವಾಗಿ ಒಪ್ಪಿಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಅವರನ್ನು “ಆಮದು ನೇತಾರ’ ಎಂದು ಟೀಕಿಸಿದ ಅವರು, ದೇಶದ ವಿರುದ್ಧ ಷಡ್ಯಂತ್ರ ನಡೆಸುವ ದಿಗ್ವಿಜಯ್‌ ಸಿಂಗ್‌ರವರ ಬಗ್ಗೆ ಎಚ್ಚರದಿಂದ ಇರಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next