Advertisement

ಸಿಕಂದರಾಬಾದ್‌ ರೈಲು ನಿಲ್ದಾಣದ ಅಗ್ನಿಪಥ್‌ ಗಲಭೆ ಪೂರ್ವ ನಿರ್ಧರಿತ

01:35 AM Jun 19, 2022 | Team Udayavani |

ಹೈದರಾಬಾದ್‌: ಹೊಸ ಮಾದರಿಯ ಸೇನಾ ನೇಮಕಾತಿಯಾದ ಅಗ್ನಿಪಥ ಯೋಜನೆ ಯನ್ನು ವಿರೋಧಿಸಿ ಶುಕ್ರವಾರ ಸಿಕಂದರಾಬಾದ್‌ ರೈಲ್ವೇ ನಿಲ್ದಾಣದಲ್ಲಿ ನಡೆದ ಗಲಭೆಯು ಹಠಾತ್ತಾಗಿ ನಡೆದ ಬೆಳವಣಿಗೆ ಯಲ್ಲ, ಈ ಗಲಭೆಗೆ ಪ್ರಚೋದ ನಾತ್ಮಕವಾದ ಆಡಿಯೋ ತುಣುಕುಗಳೇ ಕಾರಣ ಎಂಬ ಅಂಶವನ್ನು ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದಾರೆ.

Advertisement

ಗಲಭೆಗಳಿಗೆ ಪ್ರೇರಣೆ ನೀಡಿದ್ದು ಮಾತ್ರವಲ್ಲ, ಗಲಭೆಯನ್ನು ಎಲ್ಲಿ ನಡೆಸಬೇಕು, ಹೇಗೆ ಜನರನ್ನು ಸಂಘಟಿಸಬೇಕು ಎಂಬಿ ತ್ಯಾದಿ ಮಾಹಿತಿಗಳೆಲ್ಲವೂ ಗಲಭೆಕೋರರಿಗೆ ರವಾನೆಯಾಗಿವೆ. ಆಡಿಯೋ ಕ್ಲಿಪ್‌ಗ್ಳಲ್ಲಿ ಇದ್ದ ನಿರ್ದೇಶನದಂತೆಯೇ ಗಲಭೆಗಳು ನಡೆ ದಿವೆ. ಹಾಗಾಗಿ ಸಿಕಂದರಾಬಾದ್‌ನಲ್ಲಿ ನಡೆದ ಗಲಭೆಯ ಹಿಂದೆ ದೊಡ್ಡದೊಂದು ಷಡ್ಯಂ ತರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಒಂದು ಆಡಿಯೋ ಕ್ಲಿಪ್‌ನಲ್ಲಿರುವ ಅಂಶಗಳನ್ನು ಮಾಧ್ಯಮವೊಂದು ವರದಿ ಮಾಡಿದೆ. ಅದರಲ್ಲಿರುವ ಒಂದು ಧ್ವನಿ, ನೀನು ಸಿಕಂದರಾಬಾದ್‌ ರೈಲು ನಿಲ್ದಾ ಣಕ್ಕೆ ನಾಳೆ ಯಾವಾಗ ಬರುತ್ತೀಯ? ಬರು ವಾಗ ಮರೆಯದೆ ಪೆಟ್ರೋಲ್‌, ಟಯರ್‌ಗಳು, ಹಳೆಯ ಬಟ್ಟೆಗಳನ್ನು ತಂದುಬಿಡು. ಏಕೆಂ ದರೆ ರೈಲು ನಿಲ್ದಾಣಗಳಲ್ಲಿ ಇಂಥವೆಲ್ಲ ನಮಗೆ ತತ್‌ಕ್ಷಣಕ್ಕೆ ಸಿಗುವುದಿಲ್ಲ. ಹಾಗಾಗಿ ನೀವು ಇವೆಲ್ಲವನ್ನೂ ತರಬೇಕು. ಇದರಿಂದ ವಾಹನಗಳಿಗೆ ಹಾಗೂ ರೈಲುಗಳಿಗೆ ಬೆಂಕಿ ಹಚ್ಚಲು ಸಹಾಯವಾಗುತ್ತದೆ ಎಂದು ವ್ಯಕ್ತಿಯೊಬ್ಬರಿಗೆ ಆದೇಶಿಸಿದೆ.

ಇನ್ನೂ ಕೆಲವು ಆಡಿಯೋ ಸಂದೇಶಗಳಲ್ಲಿ, ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸಬೇಡಿ. ಹಳೆಯ ಸೇನಾ ನೇಮಕಾತಿ ಜಾರಿ ಯಾಗುವವರೆಗೂ ಹೋರಾಟ ಮುಂದು  ವರಿಯಲಿ ಎಂದು ಹೇಳಲಾಗಿದೆ. ಈ ನಡುವೆ ಬಿಹಾರ, ಉತ್ತರ ಪ್ರದೇಶ ಮುಂತಾದೆಡೆ ಅಗ್ನಿಪಥ ವಿರೋಧಿ ಪ್ರತಿಭಟನೆಗಳು ಶನಿವಾರವೂ ಮುಂದುವರಿದಿವೆ.

ವಿಪಕ್ಷಗಳ ಕುತಂತ್ರ- ಜ| ವಿ.ಕೆ. ಸಿಂಗ್‌: ಅಗ್ನಿಪಥದ ವಿರುದ್ಧ ದೇಶದ ನಾನಾ ರಾಜ್ಯಗಳಲ್ಲಿ ಭುಗಿಲೆದ್ದಿರುವ ಗಲಭೆಗಳ ಹಿಂದೆ ವಿಪಕ್ಷಗಳ ಕೈವಾಡವಿದೆ. ಅವರು ಯುವ ಜನರಲ್ಲಿ ಅಗ್ನಿಪಥದ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿ, ಅವರ ದಾರಿ ತಪ್ಪಿಸುವುದರ ಜತೆಗೆ ಗಲಭೆಗೆ ಪ್ರೇರೇಪಿ ಸುತ್ತಿದ್ದಾರೆ ಎಂದು ಸೇನೆಯ ಮಾಜಿ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಜ| ವಿ.ಕೆ. ಸಿಂಗ್‌ ಆರೋಪಿಸಿದ್ದಾರೆ.

Advertisement

ಸಿಂಗ್‌ ಸಭೆ: ಹಲವಾರು ರಾಜ್ಯಗಳಲ್ಲಿ ಅಗ್ನಿಪಥ್‌ ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ತಮ್ಮ ನಿವಾಸದಲ್ಲಿ ಭಾರತದ ಮೂರೂ ಪಡೆಗಳ ಮುಖ್ಯಸ್ಥರ ಜತೆಗೆ ಮಹತ್ವದ ಸಭೆ ನಡೆಸಿದರು.

ಸೇನಾ ಸೇವೆ ಕಡ್ಡಾಯವಿರುವ ದೇಶಗಳು
ರಷ್ಯಾ: 18-27 ವರ್ಷದ ಯುವಕರಿಗೆ 12 ತಿಂಗಳು ಸೇನೆಯಲ್ಲಿ ಕೆಲಸ ಕಡ್ಡಾಯ. ತಪ್ಪಿದಲ್ಲಿ ದಂಡ, ಜೈಲು.
ಉ. ಕೊರಿಯಾ: 17-18 ವರ್ಷಕ್ಕೆ ಶಾಲಾ ಶಿಕ್ಷಣ ಮುಗಿದಾಕ್ಷಣ ಸೇನೆ ಸೇರಬೇಕು. ಯುವಕರಿಗೆ 10 ವರ್ಷ, ಯುವತಿಯರಿಗೆ 7 ವರ್ಷ ಸೇವೆ.
ದಕ್ಷಿಣ ಕೊರಿಯಾ: ಯುವಕರಿಗೆ ಸೇನೆಯಲ್ಲಿ 21 ತಿಂಗಳು/ ನೌಕಾಪಡೆ ಯಲ್ಲಿ 23 ತಿಂಗಳು/ವಾಯುಪಡೆಯಲ್ಲಿ 24 ತಿಂಗಳ ಸೇವೆ ಕಡ್ಡಾಯ.
ಇಸ್ರೇಲ್‌: 18 ವರ್ಷ ತುಂಬಿರುವವರಿಗೆ ಸೇವೆ ಕಡ್ಡಾಯ. ಯುವಕರಿಗೆ 2 ವರ್ಷ 8 ತಿಂಗಳು ಹಾಗೂ ಯುವತಿಯರಿಗೆ 2 ವರ್ಷ ಕಡ್ಡಾಯ ಸೇವೆ.
ಬ್ರೆಜಿಲ್‌: 18 ವರ್ಷದ ಮೇಲ್ಪಟ್ಟ ಯುವಕರಿಗೆ 12 ತಿಂಗಳು ಸೇನೆಯಲ್ಲಿ ಕೆಲಸ ಕಡ್ಡಾಯ. ತಪ್ಪಿದವರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.
ಇರಾನ್‌:18 ವರ್ಷ ಮೇಲ್ಪಟ್ಟ ಯುವಕರಿಗೆ 18-24 ತಿಂಗಳು ಸೇವೆ ಕಡ್ಡಾಯ. ತಪ್ಪಿದಲ್ಲಿ ಸರಕಾರಿ ಕೆಲಸ, ಸರಕಾರಿ ಸೌಲಭ್ಯ ಕೈ ಸೇರುವುದಿಲ್ಲ.
ಟರ್ಕಿ: 20-41 ವರ್ಷದ ಪುರುಷರಿಗೆ ಸೇವೆ ಕಡ್ಡಾಯ.
ಕ್ಯೂಬಾ: 17-28 ವರ್ಷದ ಯುವಕರಿಗೆ 2 ವರ್ಷ ಸೇನೆಯ ಸೇವೆ ಕಡ್ಡಾಯ. ತಪ್ಪಿದಲ್ಲಿ ದಂಡ, ಜೈಲುಶಿಕ್ಷೆ.
ಸ್ವಿಟ್ಸರ್ಲೆಂಡ್‌: 20 ವರ್ಷ ಮೇಲ್ಪಟ್ಟ ಯುವಕರಿಗೆ 21 ವಾರಗಳ ಕಾಲ ಸೇನೆಯಲ್ಲಿ ಕೆಲಸ ಮಾಡುವುದು ಕಡ್ಡಾಯ.
ಎರಿಟ್ರಿಯಾ: ಸೆಕೆಂಡರಿ ಶಾಲಾ ಶಿಕ್ಷಣದಲ್ಲಿಯೇ ವಿದ್ಯಾರ್ಥಿಗಳಿಗೆ ಸೇನಾ ತರಬೇತಿ ಕಡ್ಡಾಯ. 18 ತಿಂಗಳ ಸೇವೆ ಕಡ್ಡಾಯವೆಂಬ ನಿಯಮವಿದ್ದರೂ ಅನಿರ್ದಿಷ್ಟಾವಧಿ ಸೇವೆ ಮಾಡಿಸಿಕೊಳ್ಳುತ್ತಿರುವ ಸೇನೆ.
ಸ್ವೀಡನ್‌: 2010ರಲ್ಲಿ ರದ್ದು ಮಾಡಲಾಗಿದ್ದ ಕಡ್ಡಾಯ ನಿಯಮವನ್ನು ಮರು ಜಾರಿಗೆ ಚಿಂತನೆ. ಯುವಕ ಮತ್ತು ಯುವತಿಯರಿಗೆ 9ರಿಂದ 12 ತಿಂಗಳು ಸೇವೆ ಕಡ್ಡಾಯ ಸಾಧ್ಯತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next