Advertisement

ಮಹಿಳಾ ಗುಲಾಮರ ಮೇಲೆ ದೌರ್ಜನ್ಯ

12:12 AM Jun 02, 2019 | mahesh |

ವಾಷಿಂಗ್ಟನ್‌: “ಇಸ್ಲಾಮಿಕ್‌ ಸ್ಟೇಟ್‌ನಲ್ಲಿ ಗುಲಾಮಗಿರಿಗೆ ತಳ್ಳಲ್ಪಡುತ್ತಿದ್ದ ಆ ಹೆಂಗಸರ ದುಃಖ ಅಕ್ಷರಶಃ ಅರಣ್ಯ ರೋದನವಾಗಿರುತ್ತಿತ್ತು. ಅವರ ಕಣ್ಣೀರನ್ನು ಒರೆಸಲು ಯಾರೂ ಇರಲಿಲ್ಲ. ಸುತ್ತಲಿದ್ದವರೆಲ್ಲರ ದೃಷ್ಟಿ ಅವರ ದೇಹ ಸಿರಿಯ ಮೇಲಿರುತ್ತಿತ್ತೇ ಹೊರತು ಅವರ ತೇವಗೊಂಡ ಕಣ್ಣುಗಳ ಕಡೆಗೆ ಅಪ್ಪಿತಪ್ಪಿಯೂ ಹೊರಳುತ್ತಿರಲಿಲ್ಲ.”

Advertisement

ನಾಲ್ಕು ವರ್ಷಗಳ ಹಿಂದೆ ಅಮೆರಿಕ ನೇತೃತ್ವದ ಡೆಲ್ಟಾ ಫೋರ್ಸ್‌ ಮೂಲಕ ಸೆರೆಹಿಡಿಯಲ್ಪ ಇಸ್ಲಾಮಿಕ್‌ ಸ್ಟೇಟ್‌ನ ಹಿರಿಯ ಮಹಿಳಾ ಉಗ್ರವಾದಿ ನಿಸ್ರಿನ್‌ ಅಸ್ಸಾದ್‌ ಇಬ್ರಾಹಿಂ ಎಂಬ “ಲೇಡಿ ಟೆರರಿಸ್ಟ್‌’ ನೀಡಿರುವ ಮನಕಲಕುವ ಮಾಹಿತಿಗಳಿವು. ಅಮೆರಿಕ ನ್ಯಾಯಾಲಯದಲ್ಲಿ ಮರಣದಂಡನೆಗೆ ಒಳಗಾಗಿರುವ ಆಕೆ, “ಗಾರ್ಡಿಯನ್‌’ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಮನಕಲಕುವ ಮಾಹಿತಿಗಳನ್ನು ನೀಡಿದ್ದಾಳೆ.

“ಗುಲಾಮಗಿರಿಗಾಗಿ ತರಲಾಗುತ್ತಿದ್ದ ಮಹಿಳೆಯರು ಅಥವಾ ಯುವತಿಯರ ಮೇಲೆ ಐಸಿಸ್‌ ನಾಯಕರೇ ಅತ್ಯಾಚಾರ ಎಸಗುತ್ತಿದ್ದರು. ದೇಹ ಹಂಚಿಕೊಳ್ಳಲು ಒಪ್ಪದವರಿಗೆ ಬೆತ್ತದೇಟುಗಳು ಬೀಳುತ್ತಿದ್ದವು. ಐಸಿಸ್‌ ಮುಖ್ಯಸ್ಥ ಅಬುಬಕರ್‌ ಬಾಗ್ಧಾದಿ ಖುದ್ದು ಮುಂದೆ ನಿಂತು ಬೆತ್ತದೇಟುಗಳನ್ನು ನಿರ್ದೇಶಿಸುತ್ತಿದ್ದ. ಚೆನ್ನಾಗಿ ಥಳಿಸಿದ ನಂತರ, ಯುವತಿಯರಿಗೆ ಮೇಕಪ್‌ ಹಾಕಿ ಶೃಂಗಾರಗೊಳಿಸಿ ಹಾಸಿಗೆಗೆ ದೂಡಲಾಗುತ್ತಿತ್ತು” ಎಂದು ಆಕೆ ಹೇಳಿದ್ದಾರೆ.

“ಒಂದು ದಿನ ಕಳೆಯುವಷ್ಟರಲ್ಲಿ ಅವರ ಇಡೀ ದೇಹದ ಮೇಲೆ ಹಲವಾರು “ಗುರುತು’ಗಳಿರುತ್ತಿದ್ದವು. ಆದರೆ, ಅವು ಸುಖದ ಹೆಸರಿನ ಹಿಂಸೆಯ ಗುರುತುಗಳಾಗಿರುತ್ತಿದ್ದವು. ವಿಪರ್ಯಾಸವೆಂದರೆ, ಅವು ಮಾಯುವ ಮುನ್ನವೇ ಅವರು ಮತ್ತಷ್ಟು ಅತ್ಯಾಚಾರಕ್ಕೆ ಸನ್ನದ್ಧವಾಗಬೇಕಿತ್ತು’ ಎಂದು ಆಕೆ ಖೇದ ವ್ಯಕ್ತಪಡಿಸಿದ್ದಾಳೆ. ಇನ್ನು, ಅಮೆರಿಕದಲ್ಲಿ ತಾನು ಬಂಧಿಯಾದಾಗ ಐಸಿಸ್‌ ಮುಖ್ಯಸ್ಥ ಅಬು ಅಲ್‌-ಬಾಗ್ಧಾದಿಯ ಅಡಗುದಾಣಗಳನ್ನು ನಿಖರವಾಗಿ ಗುರುತು ಹಾಕಿ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next