ಗದಗ: ಕಾಂಗ್ರೆಸ್ ಮುಖಂಡನ ಅಂತಿಮ ದರ್ಶನ ಹಾಗೂ ಅಂತ್ಯ ಸಂಸ್ಕಾರದ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಡಿ ಗದಗ ಶಹರ ಠಾಣೆಯಲ್ಲಿ ಸುಮಾರು 25 ಜನರ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲಾ ಕಾಂಗ್ರೆಸ್ ಎಸ್‌ಟಿ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ಬೆಳಧಡಿ(36) ಇತ್ತೀಚೆಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಮೃತರ ಪಾರ್ಥಿವ ಶರೀರ ಶನಿವಾರ ನಗರಕ್ಕೆ ಬರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಗೂಡಿದ್ದರು. ಇಲ್ಲಿನ ಗಂಗಾಪುರ ಪೇಟೆಯಲ್ಲಿರುವ ಮೃತರ ನಿವಾಸದಲ್ಲಿ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಸಮಯದಲ್ಲೂ ನಿಗದಿಗಿಂತ ಹೆಚ್ಚಿನ ಜನರು ಸೇರಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಸಿಎಂ ರಾಜೀನಾಮೆ ಕೊಡಿಸುವ ಯಾವ ಪ್ರಶ್ನೆ ಪಕ್ಷದ ಮುಂದಿಲ್ಲ : ಪ್ರಲ್ಹಾದ್ ಜೋಶಿ
ಈ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರಾದ ಅರುಣ ಪರಶುರಾಮ ಬೆಳದಡಿ, ವಸಂತ ಪರಸಪ್ಪ ಸಿದ್ಧಮನಹಳ್ಳಿ, ಅನಿಲ್ ಪರಸಪ್ಪ ಸಿದ್ಧಮನಹಳ್ಳಿ, ಕುಮಾರ ಯಲ್ಲಪ್ಪ ಮಾರನಬಸರಿ, ಗಣೇಶ ಯಲ್ಲಪ್ಪ ಹುಬ್ಬಳ್ಳಿ, ಕಿರಣ ಗಾಮನಗಟ್ಟಿ, ಮಣಿಕಂಠ ನಾಗಪ್ಪ ಯಲಿಗಾರ, ಅಜಯ ಮಾರುತಿ ಕುರಗೋಡ, ಸಂತೋಷ ಭರಮಣ್ಣವರ ಹಾಗೂ ರಾಜು ಲಾಲಸಾಬ ಪೆಂಡಾರಿ ಹಾಗೂ ಇನ್ನೂ 10-15 ಜನರ ವಿರುದ್ಧ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.