Advertisement

ಅರ್ಧಕ್ಕರ್ಧ ತಗ್ಗಿದ ನಿಯಮ ಉಲ್ಲಂಘನೆ: ಕೋವಿಡ್ ಭೀಕರತೆಯಿಂದ ನಿಯಮ ಪಾಲನೆ

09:12 AM Jul 22, 2021 | Team Udayavani |

ಬೆಂಗಳೂರು: ಕೊರೊನಾ ಮೊದಲ ಅಲೆಯಿಂದ ಪಾಠ ಕಲಿತ ಬೆಂಗಳೂರಿಗರು ಕೊರೊನಾ ಮುಂಜಾಗ್ರತಾ ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಸರಿಸುತ್ತಿದ್ದಾರೆ ಎನ್ನುತ್ತಿವೆ ಅಂಕಿ ಅಂಶಗಳು.

Advertisement

ರಾಜಧಾನಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕೆ ಮೊದಲ ಅಲೆಯ ಒಂಬತ್ತು ತಿಂಗಳಲ್ಲಿ ನಿತ್ಯ ಸರಾಸರಿ ಒಂದೂವರೆ ಸಾವಿರ ಮಂದಿಯಂತೆ 4.07 ಲಕ್ಷ ಮಂದಿ ದಂಡ ಕಟ್ಟಿದ್ದರು. ಆದರೆ, ಎರಡನೇ ಅಲೆಯ ಐದು ತಿಂಗಳಲ್ಲಿ ನಿತ್ಯ ಸರಾಸರಿ 750 ಮಂದಿಯಂತೆ 1.04 ಲಕ್ಷ ಮಂದಿ ಮಾತ್ರ ದಂಡ ಕಟ್ಟಿದ್ದಾರೆ. ಕೊರೊನಾ ನಿಯಮ ಉಲ್ಲಂಘನೆ ಪ್ರಕರಣಗಳು ಅರ್ಧಕ್ಕರ್ಧ ತಗ್ಗಿದ್ದು, ಈ ಮೂಲಕ ಜನರಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ಹೆಚ್ಚಿರುವುದು ಸ್ಪಷ್ಟವಾಗುತ್ತಿದೆ.

ಮಾರ್ಷಲ್‌ಗ‌ಳಿಂದ ದಂಡ: 2020 ಮೇನಲ್ಲಿ ಲಾಕ್‌ಡೌನ್‌ ತೆರವಾದ ಬಳಿಕ ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿ ಕೊಳ್ಳಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಈ ನಿಯಮ ಉಲ್ಲಂ ಸಿದವರ ವಿರುದ್ಧಪ್ರಕರಣ ದಾಖಲಿಸಿ 250 ರೂ. ದಂಡ ವಿಧಿಸುಂತೆ ಜೂನ್‌ನಿಂದ ಸೂಚನೆ ನೀಡಿತ್ತು. ನಗರದಲ್ಲಿ ಜೂನ್‌9ರಂದು ಮಾಸ್ಕ್ ಧರಿಸದ ವ್ಯಕ್ತಿಗೆ ಮೊದಲ ಬಾರಿ ದಂಡ ವಿಧಿಸಲಾಯಿತು. ಆ ನಂತರ ಜೂನ್‌18 ರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪು ಸೇರುವವರವಿರುದ್ಧ ದಂಡ ಹಾಕಲಾಯಿತು. ಬೆಂಗಳೂರಿನಲ್ಲಿ ವ್ಯಾಪಿಯಲ್ಲಿ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾರ್ಯವನ್ನು ಮಾರ್ಷಲ್‌ಗ‌ಳು ಮಾಡುತ್ತಿದ್ದಾರೆ.

ಯಾವ ಅಲೆಯಲ್ಲಿ ಎಷ್ಟು ?: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಒಟ್ಟಾರೆ ಈವರೆಗೂ 51.26 ಲಕ್ಷ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2020 ಜೂ.ನಿಂದ 2021 ಫೆಬ್ರವರಿ 28ವರೆಗೂ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ3.81, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು 25796 ಮಂದಿ ದಂಡ ಕಟ್ಟಿದ್ದರು. ಈ ವರ್ಷ ಮಾರ್ಚ್‌ 1ರಿಂದ ಜುಲೈ 17ವರೆಗೂ ಮಾಸ್ಕ್ ಧರಿಸದ ಕಾರಣ 99 ಸಾವಿರ ಮಂದಿ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು 5,600 ಮಂದಿಗೆ ದಂಡ ವಿಧಿಸಲಾಗಿದೆ.

2ನೇ ಅಲೆಯ ಭೀಕರತೆಯೂ ಕಾರಣ: ಕೊರೊನಾ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯು ಹತ್ತು ಪಟ್ಟು ತೀವ್ರವಾಗಿದೆ. ನಗರದಲ್ಲಿ ಪಾಸಿಟಿವಿಟಿ ದರ ಶೇ.40ಕ್ಕೆ ತಲುಪಿತ್ತು. ಹೊಸ ಪ್ರಕರಣಗಳು ಒಂದೇ ದಿನ 26 ಸಾವಿರ, ಸೋಂಕಿತರ ಸಾವು 375 ವರದಿಯಾಗಿದ್ದವು. ಸಕ್ರಿಯ ಪ್ರಕರಣಗಳು ಮೂರು ಲಕ್ಷಕ್ಕೆ ಹೆಚ್ಚಳವಾಗಿ, ಹಾಸಿಗೆ ಸಿಗದೇ ಸೋಂಕಿತರು ಮನೆ, ರಸ್ತೆ ಬದಿಯಲ್ಲಿಯೇ ಸಾವಿಗೀಡಾಗಿದ್ದರು. ಅಲ್ಲದೆ, ಏಪ್ರಿಲ್‌ ಮತ್ತು ಮೇನಲ್ಲಿ ಇಡೀ ದೇಶದ ಮಹಾನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ಸೋಂಕಿನ ತೀವ್ರತೆ ಹೊಂದುವ ಮೂಲಕ ಕೊರೊನಾ ಸೊಂಕಿನ ರಾಷ್ಟ್ರರಾಜಧಾನಿ ಎನಿಸಿಕೊಂಡಿತ್ತು. ಸೋಂಕಿನ ಈಭೀಕರತೆಯು ಸಾರ್ವಜನಿಕರಲ್ಲಿ ಭಯವನ್ನು ಮೂಡಿಸಿತ್ತು. ಹೀಗಾಗಿಯೇ, ಇಂದಿಗೂ ಸಾರ್ವಜನಿಕ ಸ್ಥಳಗಳಲ್ಲಿ ಶೇ.99 ರಷ್ಟು ಮಂದಿ ಮಾಸ್ಕ್ ಕಡ್ಡಾಯ ಬಳಸುತ್ತಿದ್ದಾರೆ ಎನ್ನುತ್ತಾರೆ ತಜ್ಞ ವೈದ್ಯರು

Advertisement

12.26 ಕೋಟಿ ರೂ. ದಂಡ ಸಂಗ್ರಹ: ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಜೂನ್‌ನಿಂದ ಈವರೆಗೂ ಬರೋಬ್ಬರಿ 12.26 ಕೋಟಿ ರೂ. ದಂಡ ಸಂಗ್ರಹವಾಗಿದೆ. ಮೊದಲ ಅಲೆಯ ಸಂದರ್ಭದಲ್ಲಿ9.64ಕೋಟಿ ರೂ., ಎರಡನೇ ಅಲೆಯಲ್ಲಿ 2.62ಕೋಟಿ ರೂ. ದಂಡ ಮೊತ್ತ ಸಂಗ್ರಹ‌ ವಾಗಿದೆ. ಒಟ್ಟು 215 ಮಾರ್ಷಲ್‌ಗ‌ಳು ಮತ್ತು 57 ತಂಡಗಳುಕಾರ್ಯಾಚರಣೆ ಯಲ್ಲಿವೆ. ಇವರ ಮಾಸಿಕ ವೇತನ ಸೇರಿದಂತೆ ಒಟ್ಟಾರೆ ವೆಚ್ಚ60 ಲಕ್ಷ ರೂ.ಇದೆ. ಈವರೆಗೂ ‌ ನಿಯಮೋಲ್ಲಂಘನೆ ಮಾಡಿದವರಿಂದ ಸಂಗ್ರಹಿಸಿದ ದಂಡ ಮೊತ್ತವು ಮಾರ್ಷಲ್‌ಗ‌ಳ ಹೆಚ್ಚು ಕಡಿಮೆ 20 ತಿಂಗಳ ವೇತನಕ್ಕೆ ಸಮವಾಗಲಿದೆ.

ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next