ಬೆಳಗಾವಿ: ಹಣಕಾಸು ವರ್ಷ ಪೂರ್ಣಗೊಂಡರೂ 4,105 ರೂ. ಮೊತ್ತದ ಸುಮಾರು 78 ವೈಯಕ್ತಿಕ ಠೇವಣಿ (ಪಿಡಿ) ಖಾತೆ ಗಳನ್ನು ಮುಕ್ತಾಯಗೊಳಿಸದೆ ನಿಯಮ ಉಲ್ಲಂಘಿಸಿರುವುದು ಸಿಎಜಿ ಮಂಡಿಸಿದ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳ 1 ಮತ್ತು 2ನೇ ಸಂಪುಟದ ವರದಿ ತಿಳಿಸಿದೆ.
ಸಿಎಜಿ 22021-22ನೇ ಸಾಲಿನ ಧನವಿನಿ ಯೋಗ ಲೆಕ್ಕಗಳು ಮತ್ತು ಹಣಕಾಸಿನ ಲೆಕ್ಕಗಳ 1 ಮತ್ತು 2ನೇ ಸಂಪುಟದ ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸಲಾಯಿತು.
ಪ್ರತಿ ಹಣಕಾಸು ವರ್ಷದಲ್ಲಿ ಯಾವುದೇ ವೈಯಕ್ತಿಕ ಠೇವಣಿಗಳಲ್ಲಿ ವೆಚ್ಚವಾಗದ ಹಣವನ್ನು ಏಕೀಕೃತ ನಿದಿಗೆ ವರ್ಗಾಯಿಸಿ ಆ ಠೇವಣಿಗಳನ್ನು ಮುಚ್ಚಬೇಕೆಂಬ ನಿಯಮವಿದೆ. ಆದರೆ ಸರಕಾರ 2021-22ನೇ ಸಾಲಿನಲ್ಲಿ 78 ಪಿಡಿಗಳನ್ನು ಮುಚ್ಚಿಲ್ಲ. ಇದರಿಂದ ಸಾರ್ವಜನಿಕ ಯೋಜನೆಗಳಿಗೆ ಬಳಕೆಯಾಗಬೇಕಿದ್ದ 4,105 ಕೋಟಿ ರೂ.ನಷ್ಟು ಭಾರೀ ಮೊತ್ತದ ಹಣ ಖರ್ಚಾಗದೆ ಉಳಿದುಕೊಂಡಂತಾಗಿದೆ ಎಂದು ಉಲ್ಲೇಖಿಸಲಾಗಿದೆ.
2021-22ರಲ್ಲಿ ವಿವಿಧ ಪಿಡಿ ಖಾತೆಗಳಿಗೆ ಒಟ್ಟು 4,787 ಕೋ.ರೂ. ಇದ್ದು, ಕೇವಲ 0.47 ಕೋಟಿ ರೂ. ಮೊತ್ತದ 4 ಪಿಡಿ ಖಾತೆಗಳನ್ನು ಮಾತ್ರ ಮುಚ್ಚಲಾಗಿದೆ. ಉಳಿದ ಖಾತೆಗಳು ಹಾಗೇ ಉಳಿಸಿಕೊಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಖರ್ಚಾಗದೆ ಉಳಿದ ವೈಯಕ್ತಿಕ ಠೇವಣಿಗಳ ಹಣವನ್ನು ಆಯಾ ಆರ್ಥಿಕ ವರ್ಷಕ್ಕೆ ಮುಕ್ತಾಯಗೊಳಿಸಬೇಕೆಂಬ ನಿಯಮವಿದ್ದರೂ ಸರಕಾರ 2021-22ನೇ ಹಣಕಾಸು ವರ್ಷ ಪೂರ್ಣ ಗೊಂಡರೂ 4,105 ಕೋ. ರೂ. ಗಳಷ್ಟು ಇರುವ 78 ವೈಯಕ್ತಿಕ ಠೇವಣಿ ಗಳನ್ನು ಮುಚ್ಚದೆ ನಿರ್ಲಕ್ಷಿಸ ಲಾಗಿದೆ ಎಂದು ವರದಿ ತಿಳಿಸಿದೆ.