Advertisement

ಆದೇಶ ಉಲ್ಲಂಘಿಸಿ ಜಾನುವಾರು ಸಂತೆ

02:25 PM Oct 03, 2022 | Team Udayavani |

ಜಮಖಂಡಿ: ನಗರದಲ್ಲಿ ಕಡಪಟ್ಟಿ ದೇವಸ್ಥಾನ ಆವರಣದಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಜಾನುವಾರು‌ಗಳ ಸಂತೆ ಭಯವಿಲ್ಲದೇ ನಡೆದಿದೆ. ಎಂಪಿಎಂಸಿ ಅಧಿಕಾರಿಗಳ ವೈಫಲ್ಯದಿಂದ ಜಾನುವಾರ ಸಂತೆ ನಡೆದಿದೆ ಎಂದು ಸಂತೆಗೆ ಆಗಮಿಸಿದ್ದ ರೈತರು ಆರೋಪಿಸಿದ್ದಾರೆ.

Advertisement

ಜಾನುವಾರ ಸಂತೆ ರದ್ದು ಮಾಡಲಾಗಿದೆ ಎಂದು ಸಂತೆಗೆ ಆಗಮಿಸಿದ ಸಂದರ್ಭದಲ್ಲಿ ನಮಗೆ ವಿಷಯ ಗೊತ್ತಾಗಿದೆ. ಸಂತೆ ರದ್ದಾಗಿರುವ ಹಿನ್ನೆಲೆಯಲ್ಲಿ ದನಕರು ಮಾರಾಟಗಾರರು ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆ ಬೇಡಿಕೆ ಸಲ್ಲಿಸುವ ಮೂಲಕ ಅನ್ಯಾಯವಾಗಿದೆ ಎಂದು ರೈತರು ಆರೋಪಿಸಿದರು.

ಜಿಲ್ಲಾಧಿಕಾರಿ ಆದೇಶ ನಿಷೇಧ ಮಧ್ಯೆಯೂ ಕೂಡ ಜಾನುವಾರು ಮಾರಾಟ ಜೋರಾಗಿತ್ತು. ಎಮ್ಮೆ, ಆಕಳು, ಜರ್ಸಿ ಆಕಳು ಸಹಿತ ವಿವಿಧ ಜಾನುವಾರ ಮಾರಾಟ ಯಾವುದೇ ಭಯವಿಲ್ಲದೇ ನಡೆಯಿತು. ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಜಾನುವಾರು ಸಂಜೆ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು.

ಎಪಿಎಂಸಿ ಅಧಿಕಾರಿಗಳು ಜಾನುವಾರು ಸಂತೆ ತಡೆಗಟ್ಟುವ ಪ್ರಯತ್ನ ಮಾಡಲಿಲ್ಲ. ತಮ್ಮ ಆವರಣದ ಗೇಟುಗಳಿಗೆ ಬೀಗ ಜಡಿದು ಕಚೇರಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಜಾನುವಾರು ಸಂತೆ ನಿಷೇಧ ಮಾಹಿತಿ ಇಲ್ಲದೇ ಆಗಮಿಸಿದ ರೈತರು 40 ಸಾವಿರ ಮೌಲ್ಯದ ಜಾನುವಾರು 20 ಸಾವಿರಕ್ಕೂ ಮಾರಾಟ ಮಾಡಿಕೊಂಡು ನೋವು ಅನುಭವಿಸಿದ ಪ್ರಸಂಗ ನಡೆಯಿತು.

ಅ. 27ರವರೆಗೆ ನಿಷೇಧ ಜಾನುವಾರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧಿಸಲಾಗಿದೆ. ಜಮಖಂಡಿ ಎಪಿಎಂಸಿ ಆವರಣದಲ್ಲಿ ಪ್ರತಿವಾರ ನಡೆಯುವ ಜಾನುವಾರು ಸಂತೆಯನ್ನು ಅ.27ರವರೆಗೆ ನಿಷೇ ಧಿಸಲಾಗಿದೆ. ರೈತರು ತಮ್ಮ ಜಾನುವಾರುಗಳನ್ನು ಜಮಖಂಡಿ ಮಾರುಕಟ್ಟೆಗೆ ಮಾರಾಟಕ್ಕೆ ತರಬಾರದು. -ಕಾರ್ಯದರ್ಶಿಗಳು, ಎಪಿಎಂಸಿ ಜಮಖಂಡಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next