Advertisement
ನರಿಮೊಗರು : ಇಪ್ಪತ್ತಕ್ಕೂ ಅಧಿಕ ಯುವತಿಯರನ್ನು ಮದುವೆ ಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಅನಂತರ ಅವರಿಗೆ ಅರಿವಿಲ್ಲದಂತೆ ಸೈನೈಡ್ ಕುಡಿಸಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಕನ್ಯಾನ ಮೂಲದ ಮೋಹನ್ ಕುಮಾರನ ಮೋಹದ ದಾಳಕ್ಕೆ ಬಲಿಯಾದವರಲ್ಲಿ ಸರ್ವೆಯ ವಿನುತಾ ಕೂಡ ಒಬ್ಬರು.
Related Articles
Advertisement
2009ರ ಸೆ. 17ರಂದು ಮಡಿಕೇರಿ ಬಸ್ ನಿಲ್ದಾಣದಲ್ಲಿ ವಿನುತಾಳ ಶವ ಪತ್ತೆಯಾಗಿತ್ತು. ಆದರೆ ಅಲ್ಲಿ ಅದನ್ನು ಅನಾಥ ಶವವೆಂದು ವಿಲೇವಾರಿ ಮಾಡಲಾಗಿತ್ತು. ಹೆತ್ತವರಿಗೂ ಆಕೆ ಸತ್ತಿದ್ದಾಳೆ ಎನ್ನುವ ವಿಷಯ ಗೊತ್ತಾಗಿದ್ದೇ ಸೈನೈಡ್ ಮೋಹನನ ಪ್ರಕರಣ ಬಯಲಿಗೆ ಬಂದ ಮೇಲೆ. ತನಿಖೆ ವೇಳೆ ಮೋಹನನೇ ವಿನುತಾಳ ಪ್ರಕರಣದ ಬಗ್ಗೆಯೂ ಬಾಯಿ ಬಿಟ್ಟಿದ್ದ. ಅಲ್ಲಿಯವರೆಗೆ ಆಕೆ ನಾಪತ್ತೆ ಯಾಗಿದ್ದಳೆಂದೇ ಎಲ್ಲರೂ ತಿಳಿದಿದ್ದರು.
ಹೈಕೋರ್ಟ್‌ಗೆ ಮೇಲ್ಮನವಿ
ಸರ್ವೆಯ ವಿನುತಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 2017ರ ಸೆ. 13ರಂದು ದಕ್ಷಿಣ ಕನ್ನಡ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೋಹನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ತ್ತು. ಶಿಕ್ಷೆ ರದ್ದು ಕೋರಿ ಮೋಹನ್ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಬಾಕಿಯಿದೆ.
ದಕ್ಷಿಣ ಕನ್ನಡದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ಸಂಪ್ಯದಲ್ಲಿ ರುವ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರವಿ ಮಳಿಮಠ ಹಾಗೂ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಅರ್ಜಿಯ ವಿಚಾರಣೆಯನ್ನು ಮುಂದೂಡಿತು. ಬೇರೊಂದು ಯುವತಿಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಬೆಳಗಾವಿಯ ಹಿಂಡಲಗಾ ಕಾರಾಗೃಹ ದಲ್ಲಿದ್ದ ಸೈನೈಡ್ ಮೋಹನ್‌ನನ್ನು ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆ ತಂದು ನ್ಯಾಯಪೀಠದ ಮುಂದೆ ಹಾಜರುಪಡಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಒದಗಿಸಿಕೊಡುವಂತೆ ಅಧೀನ ನ್ಯಾಯಾಲಯಕ್ಕೆ ಈ ವೇಳೆ ಸೂಚಿಸಿದ ಹೈಕೋರ್ಟ್ ನ್ಯಾಯಪೀಠವು ಎಲ್ಲ ದಾಖಲೆಗಳನ್ನು ಒಳಗೊಂಡ ಪೇಪರ್ ಬುಕ್ ಸಿದ್ಧಪಡಿಸಿ ಅದರ ಪ್ರತಿಯನ್ನು ಮೋಹನ್‌ಗೂ ಒದಗಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಜಿಲ್ಲಾ ನ್ಯಾಯಾಲಯ ದಲ್ಲಿಯೂ ತನ್ನ ಪರವಾಗಿ ತಾನೇ ವಾದಿಸುತ್ತಿದ್ದ ಮೋಹನ್ ಕುಮಾರ್ ಹೈಕೋರ್ಟ್ ನಲ್ಲಿ ನಡೆದ ಮೇಲ್ಮನವಿ ವಿಚಾರಣೆಯ ವೇಳೆಯೂ ತನ್ನ ಪರವಾಗಿ ತಾನೇ ವಾದ ಮಂಡಿಸು ವುದಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾನೆ.
ಕೋರ್ಟ್‌ನಲ್ಲಿ ತಾನೇ ವಾದ ಮಾಡುತ್ತೇನೆಂದಜಿಲ್ಲಾ ನ್ಯಾಯಾಲಯ ದಲ್ಲಿಯೂ ತನ್ನ ಪರವಾಗಿ ತಾನೇ ವಾದಿಸುತ್ತಿದ್ದ ಮೋಹನ್ ಕುಮಾರ್ ಹೈಕೋರ್ಟ್ ನಲ್ಲಿ ನಡೆದ ಮೇಲ್ಮನವಿ ವಿಚಾರಣೆಯ ವೇಳೆಯೂ ತನ್ನ ಪರವಾಗಿ ತಾನೇ ವಾದ ಮಂಡಿಸು ವುದಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾನೆ. •ಪ್ರವೀಣ್ ಚೆನ್ನಾವರ