Advertisement

ವಿನೋದ್‌ ಪ್ರಭಾಕರ್‌ ನಟನೆಯ ‘ವರದ’ಟೀಸರ್‌ ರಿಲೀಸ್‌

02:35 PM Dec 05, 2021 | Team Udayavani |

ನಟ ವಿನೋದ್‌ ಪ್ರಭಾಕರ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ನಟನೆಯ “ವರದ’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರವನ್ನು ಉದಯ್‌ ಪ್ರಕಾಶ್‌ ನಿರ್ದೇಶಿಸಿದ್ದಾರೆ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು, ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಉದಯ ಪ್ರಕಾಶ್‌ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಸುನಿತಾ ಪ್ರಕಾಶ್‌ ಅವರ ಸಹ ನಿರ್ಮಾಣವಿದೆ.

Advertisement

ಕೆ.ಕಲ್ಯಾಣ್‌ ಹಾಗೂ ಚೇತನ್‌ ಕುಮಾರ್‌ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್‌ ವರ್ಮಾ ಸಂಗೀತ ನೀಡಿದ್ದಾರೆ. ವಿನಾಯಕ ರಾಮ್‌ ಸಂಭಾಷಣೆ ಬರೆದಿದ್ದಾರೆ. ಭಜರಂಗಿ ಆನಂದ್‌ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫ‌ರೆಂಟ್‌ ಡ್ಯಾನಿ, ವಿಕ್ರಂ ಮೋರ್‌ ಸಾಹಸವಿದೆ.

ಇದನ್ನೂ ಓದಿ:ನಟಿ ಜಾಕ್ವೆಲಿನ್ ಗೆ 10 ಕೋಟಿ ರೂ ಮೌಲ್ಯದ ಉಡುಗೊರೆ ನೀಡಿದ ಸುಕೇಶ್: ವರದಿ

ವಿನೋದ್‌ ಪ್ರಭಾಕರ್‌ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್‌ ರಾಜ್‌ ನಟಿಸಿದ್ದಾರೆ. ಅಮಿತಾ ಈ ಚಿತ್ರದ ನಾಯಕಿ. ಅನಿಲ್‌ ಸಿದ್ದು, ಎಂ.ಕೆ.ಮಠ, ಅಶ್ವಿ‌ನಿ ಗೌಡ, ಗಿರೀಶ್‌ ಜತ್ತಿ, ಉಮೇಶ್‌ ಬಣಕಾರ್‌, ಪ್ರಶಾಂತ್‌ ಸಿದ್ಧಿ, ರಾಧ ರಂಗನಾಥ್‌, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್‌, ರೋಬೊ ಗಣೇಶ್‌, ಲೋಕೇಶ್‌, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next