Advertisement

ವಿನೋದ್‌ ಪ್ರಭಾಕರ್‌ ಈಗ ನಿರ್ಮಾಪಕ

11:05 AM Jan 18, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ನಟರು ತೆರೆಮುಂದೆ ನಾಯಕನಾಗಿ ಗುರುತಿಸಿಕೊಂಡು ಯಶಸ್ವಿಯಾದರೆ, ತೆರೆಹಿಂದೆ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೀಗೆ ಹುಡುಕಿದರೆ ನೂರಾರು ಹೆಸರುಗಳು ಸಿಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಹೀರೋ ಆಗಿ ಮತ್ತು ಪ್ರೊಡ್ನೂಸರ್‌ ಆಗಿ ತೆರೆಮುಂದೆ ಮತ್ತು ತೆರೆಹಿಂದೆ ಹೀಗೆ “ಡಬಲ್‌ ರೋಲ್‌’ನಲ್ಲಿ ಸೈ ಎನಿಸಿಕೊಂಡ ಪ್ರಮುಖರೆಂದರೆ, ಉಪೇಂದ್ರ, ದರ್ಶನ್‌, ಅರ್ಜುನ್‌ ಸರ್ಜಾ, ಶರಣ್‌, ಅಜೇಯ್‌ ರಾವ್‌, ಡಾರ್ಲಿಂಗ್‌ ಕೃಷ್ಣ, ಅನೀಶ್‌ ತೇಜೇಶ್ವರ್‌, ಡಾಲಿ ಧನಂಜಯ್‌ ಹೀಗೆ ಹಲವರು. ಈಗ ಈ ಸಾಲಿಗೆ ಮತ್ತೂಂದು ಹೊಸ ಹೆಸರು ಸೇರ್ಪಡೆಯಾಗುತ್ತಿದೆ.  ಆ ಹೆಸರೇ “ಮರಿ ಟೈಗರ್‌’ ಖ್ಯಾತಿಯ ವಿನೋದ್‌ ಪ್ರಭಾಕರ್‌ ಅವರದು.

Advertisement

ಹೌದು, ಸ್ಯಾಂಡಲ್‌ವುಡ್‌ನ‌ಲ್ಲಿ ಮಾಸ್‌ ಕಂ ಆ್ಯಕ್ಷನ್‌ ಹೀರೋ ಎಂದೇ ಗುರುತಿಸಿಕೊಂಡಿರುವ ನಟ ವಿನೋದ್‌ ಪ್ರಭಾಕರ್‌, ಅವರೀಗ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದ್ದಾರೆ. “ಟೈಗರ್‌ ಟಾಕೀಸ್‌’ ಎಂಬ ಹೆಸರಿನಲ್ಲಿ ತಮ್ಮದೇ ಪ್ರೊಡಕ್ಷನ್‌ ಹೌಸ್‌ ಶುರು ಮಾಡಿರುವ ವಿನೋದ್‌ ಪ್ರಭಾಕರ್‌, ಪತ್ನಿ ನಿಶಾ ವಿನೋದ್‌ ಪ್ರಭಾಕರ್‌ ಅವರ ಮೂಲಕ ಈ ಬ್ಯಾನರ್‌ನಲ್ಲಿ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಮತ್ತೆ ಹಾಡಲು ಬಂದ್ರು ಸಿದ್ದಿ ಸಿಸ್ಟರ್!

ಸದ್ಯ “ಟೈಗರ್‌ ಟಾಕೀಸ್‌’ ಬ್ಯಾನರ್‌ನಲ್ಲಿ ವಿನೋದ್‌ ಪ್ರಭಾಕರ್‌ ಅಭಿನಯದ “ಲಂಕಾಸುರ’ ಚಿತ್ರ ನಿರ್ಮಾಣವಾಗುತ್ತಿದ್ದು, ಈ ಆ್ಯಕ್ಷನ್‌ ಕಥಾಹಂದರದ ಚಿತ್ರಕ್ಕೆ ಡಿ. ಪ್ರಮೋದ್‌ ಕುಮಾರ್‌ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಲೂಸ್‌ ಮಾದ ಯೋಗಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಉಳಿದಂತೆ ಹಿರಿಯ ನಟ ದೇವರಾಜ್‌, ರವಿಶಂಕರ್‌ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಅಂದಹಾಗೆ, ವಿನೋದ್‌ ಪ್ರಭಾಕರ್‌ ತಮ್ಮ ನಿರ್ಮಾಣ ಸಂಸ್ಥೆಗೆ “ಟೈಗರ್‌ ಟಾಕಿಸ್‌’ ಎಂದು ಹೆಸರಿಡಲು ಕಾರಣ ಅವರ ತಂದೆ ಟೈಗರ್‌ ಪ್ರಭಾಕರ್‌. ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್‌ ಚಿತ್ರಗಳ ಮೂಲಕವೇ ಹೆಚ್ಚಾಗಿ ಗುರುತಿಸಿಕೊಂಡಿದ್ದ ಟೈಗರ್‌ ಪ್ರಭಾಕರ್‌ ನೆನಪಿನಲ್ಲಿಯೇ ವಿನೋದ್‌ ಪ್ರಭಾಕರ್‌ ತಮ್ಮ ಬ್ಯಾನರ್‌ಗೆ ಇಂಥದ್ದೊಂದು ಹೆಸರಿಟ್ಟು, ಮೊದಲ ಬಾರಿಗೆ ಆ್ಯಕ್ಷನ್‌ ಚಿತ್ರದ ಮೂಲಕವೇ ನಿರ್ಮಾಣ ಕಾರ್ಯ ಶುರು ಮಾಡುತ್ತಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇತ್ತೀಚೆಗೆ “ಲಂಕಾಸುರ’ ಪೋಸ್ಟರ್‌ ಕೂಡ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next