Advertisement

ಅಗಲಿದ ನಟ ವಿನೋದ್‌ ಖನ್ನಾಗೆ ಬಾಲಿವುಡ್‌ ಅಂತಿಮ ನಮನ: ಅಂತ್ಯಕ್ರಿಯೆ

07:56 PM Apr 27, 2017 | udayavani editorial |

ಹೊಸದಿಲ್ಲಿ : ಇಂದು ಬೆಳಗ್ಗೆ 11.20ರ ಹೊತ್ತಿಗೆ ಕ್ಯಾನ್ಸರ್‌ನಿಂದಾಗಿ ನಿಧನ ಹೊಂದಿದ ಬಾಲಿವುಡ್‌ ನಟ ಹಾಗೂ ಬಿಜೆಪಿ ಸಂಸದ ವಿನೋದ್‌ಖನ್ನಾ (70) ಅವರ ಅಂತ್ಯಕ್ರಿಯೆ ಇಂದು ಸಂಜೆ ಮುಂಬಯಿಯ ವೋರ್ಲಿಯಲ್ಲಿ ನಡೆಯಿತು. 

Advertisement

ಬಾಲಿವುಡ್‌ನ‌ ಹಿರಿಯ ನಟರಾದ ಅಮಿತಾಭ್‌ ಬಚ್ಚನ್‌ , ರಿಷಿ ಕಪೂರ್‌, ಅಭಿಷೇಕ್‌ ಬಚ್ಚನ್‌, ಜಾಕಿ ಶ್ರಾಫ್, ಡ್ಯಾನಿ ಡೆಂಝೋಪಾ ಮುಂತಾಗಿ ಅನೇಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. 

ಕುಟುಂಬದವರು ಹಾಗೂ ಸ್ನೇಹಿತರು, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬಂದು ನಟನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಸಂಜೆ ಐದು ಗಂಟೆಯ ಹೊತಿಗೆ ಅಂತ್ಯಕ್ರಿಯೆಯ ಸಿದ್ಧತೆಗಳು ನಡೆದವು.  

ವಿನೋದ್‌ ಖನ್ನಾ ಅವರು ಪತ್ನಿ ಕವಿತಾ, ಮಕ್ಕಳಾದ ರಾಹುಲ್‌ ಖನ್ನಾ, ಅಕ್ಷಯ್‌ ಖನ್ನಾ, ಪುತ್ರಿಯರಾದ ಸಾಕ್ಷಿ ಖನ್ನಾ ಹಾಗೂ ಶ್ರದ್ಧಾ ಅವರನ್ನು ಅಗಲಿದ್ದಾರೆ. 

ವಿನೋದ್‌ ಖನ್ನಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಹಿತ ಅನೇಕ ಹಿರಿಯ ಹಾಗೂ ಪ್ರಮುಖ ರಾಜಕಾರಣಿಗಳು ಶೋಕ ವ್ಯಕ್ತಪಡಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next