ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
Advertisement
2005ರಲ್ಲಿ ವಿನಿವಿಂಕ್ ಫೈನಾನ್ಸ್ ನಡೆಸಿದ್ದ ಶಾಸ್ತ್ರಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಕಡೆಯಿಂದ ಜನರಿಂದ ಕೋಟ್ಯಂತರ ರೂ. ಹಣ ಪಡೆದು ಹಿಂದಿರುಗಿಸದೆ ವಂಚಿಸಿದ್ದರು. ಈ ಕುರಿತು ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ವಿಚಾರಣೆಗಾಗಿ ಶಾಸ್ತ್ರಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿ ಮಾಡಲಾಗಿತ್ತು. ಇದರಿಂದಾಗಿ ಪೊಲೀಸರು ಆತನನ್ನುನ್ಯಾಯಾಂಗ ಬಂಧನಕ್ಕೊಳಪಡಿಸಿದ್ದು, ಸ್ಥಳೀಯ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ನ್ಯಾಯಾಲಯಕ್ಕೆ ಎಂಟು ತಿಂಗಳಿನಿಂದ ಸತತ ಗೈರಾಗಿ ತಲೆಮರೆಸಿಕೊಂಡಿದ್ದರು. ನಗರದಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 1.65 ಕೋಟಿ ರೂ. ಹಗರಣದಲ್ಲಿ ಶಾಸ್ತ್ರಿ ಆರೋಪಿಯಾಗಿದ್ದಾರೆ.