Advertisement

ಸಾಕ್ಷಿ, ವಿನೇಶ್‌ ನ್ಯಾಷನಲ್‌ ಚಾಂಪಿಯನ್ಸ್‌

06:35 AM Dec 02, 2018 | Team Udayavani |

ಗೋಂಡ (ಯು.ಪಿ.): ಟಾಟಾ ಮೋಟಾರ್ ಸೀನಿಯರ್‌ ನ್ಯಾಶನಲ್‌ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್‌ ಪೋಗಟ್‌ ಮತ್ತು ಸಾಕ್ಷಿ ಮಲ್ಲಿಕ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ಕ್ರಮವಾಗಿ 57 ಕೆಜಿ ಹಾಗೂ 62 ಕೆಜಿ ವಿಭಾಗದಲ್ಲಿ ಇವರು ಪ್ರಶಸ್ತಿ ಎತ್ತಿದರು.

Advertisement

ಕಾಮನ್ವೆಲ್ತ್‌ ಗೇಮ್ಸ್‌ ಹಾಗೂ ಏಶ್ಯನ್‌ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಗೆದ್ದು ಮೆರೆದಿರುವ ವಿನೇಶ್‌ ಪೋಗಟ್‌ 6ನೇ ಸಲ ನ್ಯಾಶನಲ್‌ ಚಾಂಪಿಯನ್‌ಶಿಪ್‌ ಆಗಿ ಮೂಡಿಬಂದರು. ವಿನೇಶ್‌ 2012-2016ರ ಅವಧಿಯಲ್ಲಿ ಸತತವಾಗಿ 5 ಸಲ ಚಾಂಪಿಯನ್‌ ಆಗಿದ್ದರು. ಶನಿವಾರದ ಫೈನಲ್‌ನಲ್ಲಿ ಬಬಿತಾ ವಿರುದ್ಧ ವಿನೇಶ್‌ ಜಯ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next