Advertisement
ಇಷ್ಟದಾಯಕ ಇಡಗುಂಜಿ ಬೆನಕಕಳೆದ ಅಚಾನಕ್ ಭೇಟಿಯಲ್ಲಿ ತುಂಬಾ ಮುದ ನೀಡಿದ್ದ ಜಿಲ್ಲೆಯತ್ತ ಮತ್ತೆ ಕಾಲಿಡುವ ಮನಸ್ಸಾಯಿತು. ಈ ಬಾರಿ ಮುಂಬಯಿನಿಂದ ಬರುವಾಗ ಉತ್ತರ ಕನ್ನಡ ಜಿಲ್ಲೆಯ ಪ್ರಖ್ಯಾತ ದೇವಾಲಯ ಇಡಗುಂಜಿಗೆ ತೆರಳುವ ಯೋಜನೆ ಹಾಕಿಕೊಂಡಿದ್ದೆ. ಪೂರ್ವ ತಯಾರಿ ನಡೆಸಿದ್ದ ನಾನು ಹೊನ್ನಾವರಕ್ಕೆ ಟಿಕೆಟ್ ಮಾಡಿಸಿದ್ದೆ. ಹೊನ್ನಾವರ ರೈಲ್ವೇ ಸ್ಟೇಷನ್‌ನಿಂದ ಹೊನ್ನಾವರ ಬಸ್ ನಿಲ್ದಾಣಕ್ಕೆ ಸ್ಥಳೀಯ ವ್ಯಾನ್ ಮೂಲಕ ತೆರಳಿದೆ. ಅಲ್ಲಿಂದ ಇಡಗುಂಜಿ ಬಸ್ ಹಿಡಿದು ತಲುಪಿದಾಗ ಗಂಟೆ ಅಪರಾಹ್ನ ಒಂದೂವರೆ. ಅಷ್ಟೊತ್ತಿಗಾಗಲೇ ಅಲ್ಲಿ ಪ್ರಸಾದ ಭೋಜನ ಶುರುವಾಗಿತ್ತು. ಪ್ರಸಾದ ಭೋಜನ ಪೂರೈಸಿದೆ. ದೇವರ ದರುಶನಕ್ಕಾಗಿ 3ಗಂಟೆ ವರೆಗೆ ಕಾದೆ. (ದೇಗುಲ ತೆರೆಯೋವರೆಗೆ) ಗಣಪನ ದರ್ಶನಕ್ಕಾಗಿ ಅದಾಗಲೇ ಹಲವು ಜನ ಕ್ಯೂ ನಲ್ಲಿದ್ದರು. ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ಬೆಳ್ಳಿಯ ಕವಚಧಾರಿ ಗಣಪನ ಅಲಂಕಾರ ಅವರ್ಣನೀಯ. ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ, ವಿನಾಯಕನ ದರ್ಶನ ಪಡೆಯುತ್ತಾರೆ.
ಸುಭಾಸ್ ಮಂಚಿ, ಮಂಗಳೂರು ವಿ.ವಿ.
ಕಾರಣಿಕದ ಇಡಗುಂಜಿ ಗಣಪನ ದರ್ಶನ ಏನೋ ಹೊಸ ಉತ್ಸಾಹ ಮೂಡಿಸಿತ್ತು. ಸೀದಾ ಸಾದಾ ಮುಂಬಯಿಯಿಂದ ಕುಡ್ಲಕ್ಕೆ ಬರಬೇಕಿದ್ದ ನಾನು ಏಕಾಂಗಿ ಪರ್ಯಟನೆಗೆ ಹೆಜ್ಜೆ ಇಟ್ಟಿದ್ದೆ. ಹೊರಗಡೆ ಧೋ… ಎಂದು ಸುರಿಯುತ್ತಿದ್ದ ವರ್ಷಧಾರೆಗೆ ಬಿಡುವೇ ಸಿಕ್ಕಿರಲಿಲ್ಲ. ಪ್ರತೀ ಬಾರಿಯ ನವ ಪಯಣ ಪ್ರೇರಣೆಯಾಯಿತು. ಆದಾಗ್ಯೂ ಹೊಸ ಊರು, ಹೊಸ ಜನರು, ಬೆಂಬಿಡದ ಮಳೆನೀರು, ಕೈಕೊಟ್ಟ ಚಾರ್ಜರು, ಕೈಬಿಡದ ದೇವರು ಸೇರಿ ಒಂದೊಳ್ಳೆ ಅನುಭವ ನೀಡಿದ್ದಂತೂ ಸತ್ಯ!
ಗಣೇಶ್ ಹೆಗಡೆ ಹೊನ್ನಾವರ