ಮಂಗಳೂರು : ನಗರದಲ್ಲಿ 2016ರಲ್ಲಿ ನಡೆದಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ವಿಚಾರಣೆ ಮಂಗಳೂರಿನ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರಂಭಗೊಂಡಿದ್ದು, ಜ.3ರಿಂದ 5ರ ವರೆಗೆ ಸಾಕ್ಷಿಗಳ ವಿಚಾರಣೆ ನಡೆಯಿತು.
Advertisement
ಆರೋಪಿಗಳಾದ ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್ ಯಾನೆ ಶಿವ ಯಾನೆ ಶಿವಪ್ರಸನ್ನ, ವಿನೀತ್ ಪೂಜಾರಿ, ನಿಷಿತ್ ದೇವಾಡಿಗ, ಶೈಲೇಶ್ ಯಾನೆ ಶೈಲು, ಮಂಜುನಾಥ್ ಶೆಣೈ ಯಾನೆ ಮಂಜುನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳ ಪೈಕಿ ವಿಘ್ನೇಶ್ ನಾಯಕ್ 2020ರ ನವೆಂಬರ್‌ನಲ್ಲಿ ತನ್ನ ಮನೆ ಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.