Advertisement

ವಿನಯ ರಾಜಕೀಯ ಅಜ್ಞಾನದ ಉಡಾಫೆ ವ್ಯಕ್ತಿ

01:09 PM Oct 23, 2017 | |

ಹುಬ್ಬಳ್ಳಿ: ತಮ್ಮ ಅಯೋಗ್ಯತೆ, ಅಸಮರ್ಥತೆ ಹಾಗೂ ಕೊಳಕುತನ ಮುಚ್ಚಿಕೊಳ್ಳಲು ಎದುರಾಳಿಗಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುವುದೇ ರಾಜಕಾರಣ ಎಂದು ಪರಿಗಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಒಬ್ಬ ರಾಜಕೀಯ ಅಜ್ಞಾನದ ಉಡಾಫೆ ವ್ಯಕ್ತಿ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ರೀತಿ ಅನರ್ಥಕಾರಿ ಹೇಳಿಕೆ ಮೂಲಕ ಅಪಹಾಸ್ಯಕ್ಕೀಡಾಗಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. 

Advertisement

ಬಹುಶಃ 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದ ನೋವು, ಹತಾಶೆ ಅವರಲ್ಲಿ ಇನ್ನೂ ಕಡಿಮೆಯಾಗದೇ ಹೀಗೆ ಪದೇ ಪದೇ ನನ್ನ ವಿರುದ್ಧ ಮಾತನಾಡುವುದು ಅವರ ಚಾಳಿಯಾಗಿ ಬಿಟ್ಟಿದೆ.

ರಾಜಕೀಯದಲ್ಲಿ ರಚನಾತ್ಮಕ ಟೀಕೆಯನ್ನು ಸ್ವಾಗತಿಸದಷ್ಟು ಅಪ್ರಬುದ್ಧ ನಾನಲ್ಲ. ಆದರೆ ವ್ಯಕ್ತಿಗತ ನಿಂದನೆ ಸಹಿಸುವುದಿಲ್ಲ. ನಾನು ಯಾವಾಗ ಯಾವ ಕಾಪೋìರೇಶನ್‌ ಚುನಾವಣೆಗೆ ಸ್ಪಧಿಸಿದ್ದೆ ಎಂಬುದನ್ನು ವಿನಯ ಕುಲಕರ್ಣಿ ತಿಳಿಸಲಿ. ಇಲ್ಲದಿದ್ದರೆ ತಮ್ಮ ಅಜ್ಞಾನದ ಬಗ್ಗೆ ಜನರಲ್ಲಿ ಕ್ಷಮೆ ಕೇಳುವ ನೈತಿಕ ಧೈರ್ಯ ಪ್ರದರ್ಶಿಸಬೇಕು. 

ವಿನಯ ಕುಲಕರ್ಣಿಯವರು ಇನ್ನಾದರೂ ಇಂತಹ ಉಡಾಫೆ ಮಾತನಾಡುವುದನ್ನು ನಿಲ್ಲಿಸಬೇಕು. ಹೀಗೆ ಅನರ್ಥಕಾರಿ ಹೇಳಿಕೆ ಕೊಡುತ್ತ ನಿಮ್ಮ ಪಕ್ಷದ ರಾಹುಲ್‌ಗಾಂ ಧಿ ಹೇಗೆ ದೇಶಾದ್ಯಂತ ಚಿಕ್ಕಮಕ್ಕಳಿಂದಲೂ ಅಪಹಾಸ್ಯಕ್ಕೀಡಾಗಿದ್ದರೆಂಬುದನ್ನು ತಿಳಿದು ಮಾತನಾಡಬೇಕು. ನೀವು ಕೂಡಾ ಈ ಭಾಗಕ್ಕೆ ಮತ್ತೂಬ್ಬ ರಾಹುಲ್‌ಗಾಂ ಧಿ ಆಗಬಾರದೆಂದು ಜೋಶಿ ವ್ಯಂಗ್ಯವಾಡಿದ್ದಾರೆ. 

ಹಾಲು ಮಾರುವ ಸ್ಥಿತಿ ಬಂದಿಲ್ಲ: ಕಾರಣಾಂತರ ಗಳಿಂದ ಮನೆಯಲ್ಲಿ ಗೋವುಗಳನ್ನು ಸಾಕಿರಲಿಕ್ಕಿಲ್ಲ, ಆದರೆ ಗೋವುಗಳನ್ನು ತಾಯಿಯೆಂದು ಭಾವಿಸಿರುವ ಪರಂಪರೆಯಿಂದ ಬಂದವನು ನಾನು. ನಿಮ್ಮಂತೆ ಗೋವುಗಳನ್ನು ವಾಣಿಜ್ಯ ಕಾರಣಕ್ಕಾಗಿ ಸಾಕಲು ಸಾಧ್ಯವಾಗಿರಲಿಕ್ಕಿಲ್ಲ.

Advertisement

ನಿಮ್ಮಂತೆ ನನ್ನ ಬಳಿ ನೂರಾರು ಎಕರೆಯಷ್ಟು ಭೂಮಿಯೂ ಇಲ್ಲ ಅಥವಾ ನಾನು ರಾಜಕಾರಣಕ್ಕೆ ಬಂದ ನಂತರ ನಿಮ್ಮಂತೆ ಅಷ್ಟು ಸಂಪತ್ತನ್ನೂ ಗಳಿಸಿದವನಲ್ಲ. ನಾನು ಏನಿದ್ದರೂ ಒಂದು ಸಾಮಾನ್ಯ ಕೆಳ ಮಧ್ಯಮ ವರ್ಗದಿಂದ ಬಂದು ನಾನು ಕ್ಷೇತ್ರಕ್ಕೆ ಮಾಡಿದ ಒಳ್ಳೆಯ ಕಾರ್ಯಗಳಿಂದ 3 ಬಾರಿ ಸತತವಾಗಿ ಚುನಾಯಿತನಾದವನು. 

ಹಾಲು ಮಾರಿ ಹಣ ಮಾಡುವ ಅನಿವಾರ್ಯತೆ ನನಗೆ ಬಂದಿಲ್ಲ. 2014ರ ಸಂಸತ್‌ ಚುನಾವಣೆಯಲ್ಲಿ ನಿಮ್ಮ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲೇ ನಿಮಗಿಂತ 24000 ಅ ಧಿಕ ಮತಗಳನ್ನು ಪಡೆದು ನಾನು ಗೆದ್ದಿರುವೆನೆಂಬುದನ್ನು ನಿಮ್ಮ ಮುಂದಿನ ಭವಿಷ್ಯ ದೃಷ್ಟಿಯಿಂದಲಾದರೂ ಮರೆಯಬಾರದು. 

ಮೊದಲು ಹುಬ್ಬಳ್ಳಿ-ಧಾರವಾಡ ಮಹಾನಗರದ ರಸ್ತೆಗಳ ದುಸ್ಥಿತಿ ನೋಡಿ ಕಳೆದ 3-4 ವರ್ಷಗಳಿಂದ ಮಹಾನಗರದ ಪಾಲಿಕೆಯ  ನಿವೃತ್ತ ಸಿಬ್ಬಂದಿಗೆ ಬರಬೇಕಾದ ರೂ 137 ಕೋಟಿ ಪಿಂಚಣಿ ಹಣವನ್ನು ಮುಖ್ಯಮಂತ್ರಿ ಎದುರಿಗೆ ನಿಂತು ಜೋರು ಮಾಡಿ ತರುವ ಯೋಗ್ಯತೆ ಇಲ್ಲದ ವಿನಯ ಕುಲಕರ್ಣಿ ಅವರಿಗೆ ನನ್ನ ಬಗ್ಗೆಯಷ್ಟೇ ಅಲ್ಲ, ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತರ ಬಗ್ಗೆಯೂ ಹಗುರ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸಂಸದ ಜೋಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next