Advertisement

ಚಾರ್ಲಿ ಸಿನಿಮಾ ನೋಡಿ ಅಳುವ ಮುಖ್ಯಮಂತ್ರಿಗಳಿಗೆ ಜನರ ನೋವು ಅರ್ಥವಾಗುತ್ತಿಲ್ಲವೇ ? : ಸೊರಕೆ

06:49 PM Jun 25, 2022 | Team Udayavani |

ಕಾಪು : ನಾಯಿಯ ಕುರಿತಾಗಿ ಇರುವ ಚಾರ್ಲಿ ಫಿಲಂ ನೋಡಿ ಬಿಕ್ಕಿ ಬಿಕ್ಕಿ ಅತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ರಾಜ್ಯದ ಜನತೆಯ ನೋವು ಅರ್ಥವಾಗದೇ ಇರುವುದು ದೊಡ್ಡ ವಿಪರ್ಯಾಸವಾಗಿದೆ. ರಾಜ್ಯದ ಜನತೆ ಧರ್ಮ, ಪುಸ್ತಕ, ಜಾತಿ ವಿಚಾರಗಳಲ್ಲಿ ಗೊಂದಲಕ್ಕೆ ಗುರಿಯಾಗಿದ್ದು ಸರಕಾರ ಜನರ ಭಾವನೆಗಳಿಗೆ‌ ಸ್ಪಂಧಿಸುವ ಕೆಲಸ ಮಾಡಬೇಕಿದೆ ಎಂದು ಮಾಜಿ‌ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

Advertisement

ಜೂ. 25 ರಂದು ಕಾಪು ಪೇಟೆಯಲ್ಲಿ ಪ್ರವಾದಿ ನಿಂದನೆ ಮಾಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹ, ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿಯವರ ಮೇಲೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿರುವುದು ಮತ್ತು ಯುವ ಜನರ ಭವಿಷ್ಯಕ್ಕೆ ಮಾರಕವಾದ ಅಗ್ನಿಪಥ್ ಯೋಜನೆ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರಕಾರದ ಜನ ವಿರೋಧಿ ನೀತಿ, ಕೋಮು ಭಾವನೆ ಕೆರಳಿಸುವ ನಿರ್ಧಾರಗಳಿಂದಾಗಿ ದೇಶದ ಜನತೆ ತಲೆ ತಗ್ಗಿಸುವಂತಾಗಿದೆ. ಅಗ್ನಿ ಪಥ್ ಯೋಜನೆಯ ಮ‌ೂಲಕ ಸೇನೆಯ ಘನತೆಯನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಮುಖಂಡರ ಮೂಲಕವಾಗಿ ಧರ್ಮ ನಿಂದನೆ ನಡೆಸುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಇಡಿ ಸುಳಿಯೊಳಗೆ ಸಿಲುಕಿಸಿ, ವಿರೋಧ ಪಕ್ಷವನ್ನು ನಾಶ ಪಡಿಸುವ ಯತ್ನ ನಡೆಯುತ್ತಿದೆ. ಇಂತಹ ಜನ ವಿರೋಧಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.

ಇದನ್ನೂ ಓದಿ : ಕಿಷ್ಕಿಂದಾ ಅಂಜನಾದ್ರಿಗೆ ಹೈಕೋಟ್ ಸಿಜೆ ರಿತುರಾಜ್ ಆವಸ್ತಿ ಕುಟುಂಬ ಸಮೇತ ಭೇಟಿ

Advertisement

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರುವ ಬಿಜೆಪಿಯದ್ದು ಹಿಟ್ ಆ್ಯಂಡ್ ರನ್ ಸಂಸ್ಕೃತಿಯಾಗಿದೆ. ತಪ್ಪನ್ನು ಪ್ರಶ್ನಿಸುವವರನ್ನು ಟಾರ್ಗೆಟ್ ಮಾಡುವ ಮೂಲಕ ಮುಗಿಸಿ ಬಿಡುವ ಪ್ರಯತ್ನ ನಡೆಸುತ್ತಿದೆ. ಇಂತಹ ಸರಕಾರವನ್ನು ಕಿತ್ತೊಗೆಯುವುದೇ ನಮ್ಮೆಲ್ಲರ ಆದ್ಯತೆಯಾಗ ಬೇಕಿದೆ ಎಂದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾಧಿಕ್, ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಕೆಪಿಸಿಸಿ ಕಾರ್ಯದರ್ಶಿ ಅಬ್ದುಲ್ ಗಫೂರ್, ಪಕ್ಷದ ಮುಖಂಡರಾದ ಶಿವಾಜಿ ಎಸ್. ಸುವರ್ಣ, ಕೇಶವ್ ಹೆಜ್ಮಾಡಿ, ನವೀನ್ ಎನ್. ಶೆಟ್ಟಿ, ಮೆಲ್ಬಿನ್‌ ಡಿ ಸೋಜ, ಮಹಮ್ಮದ್ ಫಾರೂಕ್ ಚಂದ್ರನಗರ, ಹರೀಶ್ ನಾಯಕ್, ವೈ. ಸುಕುಮಾರ್, ರಾಜೇಶ್ ಶೆಟ್ಟಿ ಪಾಂಗಾಳ, ಗಣೇಶ್ ಕೋಟ್ಯಾನ್, ಅಶ್ವಿನಿ ಬಂಗೇರ, ಐಡಾ ಗಿಬ್ಬಾ ಡಿ ಸುಧೀರ್ ಕರ್ಕೇರ, ಕರುಣಾಕರ್ ಪಡುಬಿದ್ರಿ, ಸುಧಾಕರ ಸಾಲ್ಯಾನ್, ಅಮೀರುದ್ದೀನ್ ಕಾಪು, ಗಣೇಶ್ ಆಚಾರ್ಯ, ಮಹೇಶ್ ಶೆಟ್ಟಿ ಕುರ್ಕಾಲು, ಮಾಧವ ಆರ್. ಪಾಲನ್, ರಂಜನಿ ಹೆಗ್ಡೆ, ಶೋಭಾ ಬಂಗೇರ, ಫರ್ಜಾನ‌, ರಾಧಿಕಾ ಸುವರ್ಣ, ಮಹಮ್ಮದ್ ಆಸಿಫ್, ಸೊರಕೆಯವರ ಆಪ್ತ ಕಾರ್ಯದರ್ಶಿ ಅಶೋಕ್‌ ನಾಯರಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next