Advertisement

ವಿನಯ್ ರಾಜಕುಮಾರ್ “ಅದೊಂದಿತ್ತು ಕಾಲ” ಬರ್ತ್ ಡೇ ಗಿಫ್ಟ್

01:35 PM May 09, 2023 | Team Udayavani |

ನಟ ವಿನಯ್‌ ರಾಜಕುಮಾರ್‌ ಅಭಿನಯದ “ಅದೊಂದಿತ್ತು ಕಾಲ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ “ಅದೊಂದಿತ್ತು ಕಾಲ’ ಸಿನಿಮಾದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

ಇದೀಗ ಸಿನಿಮಾದ ನಾಯಕ ನಟ ವಿನಯ್‌ ರಾಜಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ “ಅದೊಂದಿತ್ತು ಕಾಲ’ ಚಿತ್ರತಂಡ, ಸಿನಿಮಾದ ವಿಶೇಷ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಈ ಸ್ಪೆಷಲ್‌ ಪೋಸ್ಟರ್‌ನಲ್ಲಿ ನಾಯಕ ವಿನಯ್‌ ರಾಜಕುಮಾರ್‌ ಬುಲೆಟ್‌ ಬೈಕ್‌ನಲ್ಲಿ ಮಾಸ್‌ ಎಂಟ್ರಿ ಕೊಡುವಂತಿದ್ದು, ಪೋಸ್ಟರ್‌ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

“ಭುವನ್‌ ಸಿನಿಮಾಸ್‌’ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್‌ ಹಾಗೂ ಎನ್‌. ಲೋಕೇಶ್‌ ನಿರ್ಮಿಸುತ್ತಿರುವ “ಅಂದೊಂದಿತ್ತು ಕಾಲ’ ಸಿನಿಮಾಕ್ಕೆ ಕೀರ್ತಿ ನಿರ್ದೇಶನವಿದೆ.

ಸಿನಿಮಾದಲ್ಲಿ ವಿನಯ್‌ ರಾಜ್‌ಕುಮಾರ್‌ ಅವರಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಿಶಾ ಮಿಲನ, ಅರುಣಾ ಬಾಲರಾಜ್‌ ಮೋಹನ್‌ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ್‌ ಜಗ್ಗಪ್ಪ, ಧರ್ಮೆಂದ್ರ ಅರಸ್‌, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರು “ಅಂದೊಂದಿತ್ತು ಕಾಲ’ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅಭಿಷೇಕ್‌ ಛಾಯಾಗ್ರಹಣ, ಎ.ಆರ್‌. ಕೃಷ್ಣ ಸಂಕಲನವಿದೆ. ಸದ್ಯ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಜೂನ್‌ ತಿಂಗಳಿನಲ್ಲಿ ‌ “ಅಂದೊಂದಿತ್ತು ಕಾಲ’ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next