ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾಟ್ರಾ ಅವರ ಸೇವಾವಧಿಯನ್ನು 2024 ಏ.30ರ ವರೆಗೆ ವಿಸ್ತರಿಸಲಾಗಿದೆ.
Advertisement
ಈ ಬಗ್ಗೆ ಕೇಂದ್ರ ಸರ್ಕಾರದ ನೇಮಕ ಸಮಿತಿ ಈ ತೀರ್ಮಾನ ಕೈಗೊಂಡಿದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಾಲಿ ಸರ್ಕಾರದ ಅವಧಿ ಮುಕ್ತಾಯದ ವರೆಗೆ ಅವರು ಕರ್ತವ್ಯದಲ್ಲಿ ಮುಂದುವರಿಯಲಿದ್ದಾರೆ.
ವರ್ಷಾಂತ್ಯಕ್ಕೆ ಅವರು ನಿವೃತ್ತಿಯಾಗಬೇಕಾಗಿತ್ತು. ಅವರು 1988ನೇ ಬ್ಯಾಚ್‌ನ ಐಎಫ್ಎಸ್ ಅಧಿಕಾರಿ. ಜಿ20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಡಿ.1ರಿಂದ ಭಾರತವೇ ವಹಿಸಿಕೊಳ್ಳುವುದರಿಂದ ಈ ನಿರ್ಧಾರ ಮಹತ್ವ ಪಡೆದಿದೆ.