ಚಿಕ್ಕಮಗಳೂರು : ಶಾಸಕ ರೇಣುಕಾಚಾರ್ಯಸಹೋದರನ ಮಗನ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವಿನಯ ಗುರೂಜಿ ಅವರನ್ನು ಭೇಟಿಯಾದ ಚನ್ನಗಿರಿ ಪೊಲೀಸರು ಇಂಚಿಂಚೂ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಆಶ್ರಮಕ್ಕೆ ಆಗಮಿಸಿ ಚಂದ್ರು ಭೇಟಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ರವಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಆಶ್ರಮಕ್ಕೆ ಭೇಟಿ ನೀಡಿದ ಪೊಲೀಸರ ತಂಡ ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು.? ಭೇಟಿ ವೇಳೆ ಏನಾದ್ರೂ ಸಮಸ್ಯೆಯನ್ನ ನಿಮ್ಮೊಂದಿಗೆ ಹೇಳಿಕೊಂಡಿದ್ರಾ? ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ ಎಂದು ವಿನಯ್ ಗುರೂಜಿ ಬಳಿ ಪೊಲೀಸರು ಪ್ರಶ್ನೆಗಳನ್ನು ಕೇಳಿದ್ದಾರೆ.
ಚಂದ್ರು ಆಶ್ರಮದ ಭಕ್ತ, ಪ್ರತಿಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೆನೂ ನಾನು ಮಾತನಾಡಿಲ್ಲ ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನ ಕಳುಹಿಸಿಕೊಟ್ಟಿದ್ದೇನೆ, ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ಗುರೂಜಿ ಹೇಳಿದ್ದಾರೆ.
Related Articles
ಬಳಿಕ ಆಶ್ರಮದ ಸಿಬ್ಬಂದಿಗಳ ಜೊತೆಯೂ ಮಾಹಿತಿಯನ್ನೂ ಪೊಲೀಸರು ಕಲೆ ಹಾಕಿದ್ದಾರೆ.
ಇದನ್ನೂ ಓದಿ : ತಿರುವನಂತಪುರ ಮೇಯರ್ ಪತ್ರ ವಿವಾದ: ಕಾಂಗ್ರೆಸ್-ಬಿಜೆಪಿ ಮುಖಂಡರಿಂದ ಪ್ರತಿಭಟನೆ