Advertisement
ಇದು ಇರುವುದು ಮಾರ್ಗೊàಸಾ ರಸ್ತೆ (ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮ ರಸ್ತೆ). ಆ ರಸ್ತೆಯಲ್ಲಿ ಸಾಗುವವರಿಗೆ ಇದೊಂದು ಅಚ್ಚರಿಯ ತಾಣ. ಕಾರಣ, ಈ ಉಪಾಹಾರ ಗೃಹದ ಮುಂದೆ ನಿಂತ ಸಾಲು ಸಾಲು ಜನರು. ಉಪಾಹಾರ ಸವಿಯಲು ಬಂದ ಜನರು, ಟೈಮಾದ್ರೂ ಪರ್ವಾಗಿಲ್ಲ, ರುಚಿ- ಶುಚಿಯಾದ, ಬಿಸಿಯಾಗಿ ಸಿಗುವ ಇಲ್ಲಿಯ ಆಹಾರವನ್ನು ಸವಿದೇ ಹೋಗಬೇಕು ಎನ್ನುವ ಸಂಯಮದಿಂದ ನಿಂತಿರುತ್ತಾರೆ. ಹಾಗಾದರೆ, ವೀಣಾ ಸ್ಟೋರ್ನ ಸ್ಪೆಷಾಲಿಟಿ ಏನು? ಅದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಇಲ್ಲಿನ ರುಚಿ ಬೆಂಗಳೂರಿಗೆ ಪರಿಚಿತ. ಇಡ್ಲಿ, ವಡೆ ಎಂದರೆ ಮೊದಲು ನೆನಪಾಗುವುದು ಮಲ್ಲೇಶ್ವರದ ವೀಣಾ ಸ್ಟೋರ್!
ವೀಣಾ ಸ್ಟೋರ್ ಆರಂಭವಾಗಿದ್ದು 1977ರಲ್ಲಿ. ಈಗ ಅದಕ್ಕೆ 41ರ ಹರಯ. ಮೊದಲು ಚಿಕ್ಕದಾಗಿ ಆರಂಭಗೊಂಡ ಈ ಅಂಗಡಿ, ಕ್ಯಾಂಡಿಮೆಂಟ್ಸ್ ರೂಪದಲ್ಲಿತ್ತು. ಕಾಲಕ್ರಮೇಣ ಇಲ್ಲಿಯ ಜನರ ಅಭಿರುಚಿಗೆ ತಕ್ಕಂತೆ ಇಡ್ಲಿ, ವಡೆ ಇನ್ನಿತರ ತಿಂಡಿಗಳನ್ನು ಮಾಡಲು ಆರಂಭಿಸಿದರು. ಇದರ ಸ್ಥಾಪಕರು ಸೂರ್ಯನಾರಾಯಣ ಹೆಗಡೆ ಕೊಪ್ಪೇಸರ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು. ಈಗ ವೀಣಾ ಸ್ಟೋರ್ನ ಹೊಣೆ ಹೊತ್ತವರು, ಅವರ ಪುತ್ರ ಪ್ರದೀಪ್ ಹೆಗಡೆ. ಇಲ್ಲಿನ ಸ್ಪೆಷಾಲಿಟಿ
ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್, ಶಾವಿಗೆ ಬಾತ್, ಅವಲಕ್ಕಿ ಬಾತ್, ಬಿಸಿಬೇಳೆ ಬಾತ್, ಖಾರಾ ಪೊಂಗಲ್, ಸಿಹಿ ಪೊಂಗಲ್, ಪುಳಿಯೊಗರೆ, ಹರ್ಬಲ್ ಜ್ಯೂಸ್‌ಗಳನ್ನು ಇಲ್ಲಿ ವಿಶೇಷವಾಗಿ ತಯಾರಿಸುತ್ತಾರೆ.ಇಲ್ಲಿ ಸ್ವತ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ. ವೀಣಾ ಸ್ಟೋರ್ಗೆ ಆಹಾರ ಸವಿಯಲು ಕಿರುತೆರೆ, ಸಿನಿಮಾ, ನಾಟಕ, ಸಾಹಿತಿಗಳು ಆಗಾಗ್ಗೆ ಬರುತ್ತಾರೆ. ಪುನೀತ್ ರಾಜ್‌ಕುಮಾರ್ ಅವರ ನೆಚ್ಚಿನ ಬ್ರೇಕ್‌ಫಾಸ್ಟ್ ತಾಣವೂ ಇದು ಹೌದು. ಅಲ್ಲದೇ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರಿಗೂ ವೀಣಾ ಸ್ಟೋರ್ನ ರುಚಿ ಗೊತ್ತು.
Related Articles
ಇಲ್ಲಿ ಪಾರ್ಸಲ್ ವ್ಯವಸ್ಥೆ ಕೂಡ ಚೆನ್ನಾಗಿದೆ. ಆದರೆ, ಆಹಾರದ ಪಾಕೆಟುಗಳನ್ನು ಮನೆಗೆ ಕಳುಹಿಸಿಕೊಡುವುದಿಲ್ಲ. ದುಾರವಾಣಿ ಮೂಲಕ ಬುಕ್ ಮಾಡಿದರೆ, ಪಾರ್ಸಲ್ ಮಾಡಿ ಕಟ್ಟಿಡಲಾಗುತ್ತದೆ. ಪ್ರದೀಪ್ ಹೆಗಡೆ ಅವರ ಪ್ರಕಾರ, ವೀಣಾ ಸ್ಟೋರ್ಗೆ ಕಾಯಂ ಬ್ರೇಕ್‌ಫಾಸ್ಟ್ ಅತಿಥಿಗಳಿದ್ದಾರಂತೆ. ಅನೇಕ ಗ್ರಾಹಕರು 25 ವರ್ಷಗಳಿಂದ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಬಂದು ಇಲ್ಲಿಯೇ ಆಹಾರ ಸ್ವೀಕರಿಸುತ್ತಿದ್ದಾರಂತೆ.
Advertisement
ತೆರೆಯುವ ಸಮಯ: ವಾರದ ಎಲ್ಲಾ ದಿನಗಳಲ್ಲಿ. ಬೆಳಗ್ಗೆ 7.00 ರಿಂದ ಬೆಳಗ್ಗೆ 11.30, ಮಧ್ಯಾಹ್ನ 3.30ರಿಂದ ರಾತ್ರಿ 8.30.ವಿಳಾಸ: ವೀಣಾ ಸ್ಟೋರ್, 15ನೇ ಅಡ್ಡರಸ್ತೆ (ಮಾರ್ಗೊàಸಾ ರಸ್ತೆ), ಗಿರಿಯಾಸ್ ಮುಂಭಾಗ, ಮಲ್ಲೇಶ್ವರಂ, ಬೆಂಗಳೂರು.
ಸಂಪರ್ಕ: 080- 23344838 ಚಿತ್ರ-ಲೇಖನ: ಬಳಕೂರು ವಿ.ಎಸ್. ನಾಯಕ್