Advertisement
ಮಂಜುನಾಥ ಬಡಾವಣೆಯ ನಿವಾಸಿಯೊಬ್ಬರ ಮನೆ ಬಳಿ ಯಾವುದೇ ಅನುಮತಿ ಪಡೆಯದೆ ಟವರ್ ಅಳವಡಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದ ನಾವುಗಳು ಅವರಿಗೆ ಇಲ್ಲಿ ಟವರ್ ಅಳವಡಿಸುವುದು ಬೇಡವೆಂದು ಸೂಚಿಸಿದಾಗ ಅಳವಡಿಸಲ್ಲವೆಂದು ಒಪ್ಪಿಕೊಂಡಿದ್ದರೂ ಮತ್ತೆ ಟವರ್ ಅಳವಡಿಸಲು ಮುಂದಾಗಿದ್ದಾರೆ. ಪಕ್ಕದಲ್ಲೇ ಶಾಲೆ ಇದೆ, ಹಾಗೂ ಸುತ್ತಮುತ್ತಲಿನಲ್ಲಿ ಮನೆಗಳಿವೆ ಟವರ್ ಅಳವಡಿಕೆಯಿಂದ ನಾಗರೀಕರು, ಮಕ್ಕಳು,ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಹಾಗೂ ಪರಿಸರಕ್ಕೂ ಹಾನಿಯಾಗುವ ಹಿನ್ನೆಲೆಯಲ್ಲಿ ನಗರಸಭೆಗೆ ನಿರಪೇಕ್ಷಣಾ ಪತ್ರ ಹಾಗೂ ಪರವಾನಗಿಗೆ ಅರ್ಜಿ ಬಂದಲ್ಲಿಯೂ ಟವರ್ ಅಳವಡಿಸಲು ಅನುಮತಿ ನೀಡಬಾರದೆಂದು, ಅನುಮತಿ ನೀಡಿದ್ದೇ ಆದಲ್ಲಿ ಮುಂದೆ ಶಾಲಾ ಮಕ್ಕಳು, ಸುತ್ತಮುತ್ತಲ ನಿವಾಸಿಗಳೊಳಗೂಡಿ ಪ್ರತಿಭಟನೆ ಹಾದಿ ಹಿಡಿಯಬೇಕಾದೀತೆಂದು ಸದಸ್ಯೆ ರಾಧಾ ಎಚ್ಚರಿಸಿದ್ದಾರೆ.
ಈ ಸಂಬಂಧ ವಾರ್ಡ್ ನಗರಸಭೆ ಸದಸ್ಯೆ ರಾಧ, ಜಿ.ಎನ್.ರಾಜೇಶ್, ಕಿರಂಗೂರು ಬಸವರಾಜ್, ಶ್ರೀನಿವಾಸ್, ಕಾಕಡೆಲೋಕೇಶ್, ಪದ್ಮ, ಚಂದ್ರಪ್ರಭ ಸೇರಿದಂತೆ ಸುತ್ತಮುತ್ತಲ ನಿವಾಸಿಗಳು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ : ಉಡುಪಿ: ಎಟಿಎಂ ಒಡೆಯಲು ಯತ್ನಿಸಿದ 19 ವರ್ಷದ ಯುವಕನ ಬಂಧನ
Related Articles
ಮಂಜುನಾಥ ಬಡಾವಣೆಯಲ್ಲಿ ಅನಧಿಕೃತವಾಗಿ ಟವರ್ ಅಳವಡಿಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಇತ್ತು ಅಳವಡಿಸದಂತೆ ಎಚ್ಚರಿಕೆ ನೀಡಿ, ತಡೆ ಹಿಡಿಯಲಾಗಿದೆ. ಟವರ್ ಅಳವಡಿಸುವ ಕಂಪನಿಯವರು ಅರ್ಜಿ ಸಲ್ಲಿಸಿದಲ್ಲಿ ಕಾನೂನು ರೀತ್ಯ ಕ್ರಮವಹಿಸಲಾಗುವುದೆಂದು ನಗರಸಭೆ ಪೌರಾಯುಕ್ತ ರವಿಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.
Advertisement