Advertisement
“ದಿ ವಿಲನ್’ ಚಿತ್ರ ಅಷ್ಟೊಂದು ಕಲೆಕ್ಷನ್ ಮಾಡಿತು ಎಂಬುದು ಇಲ್ಲಿ ವಿಷಯವಲ್ಲ,ಬದಲಾಗಿ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತಾರವಾಗುವ ಜೊತೆಗೆ ದೊಡ್ಡ ಮಟ್ಟದ ಕಲೆಕ್ಷನ್ ಬರುತ್ತಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ಬೆಳವಣಿಗೆಯಿಂದ ಕನ್ನಡ ಚಿತ್ರರಂಗದ ಅನೇಕರ ಮೊಗದಲ್ಲಿ ನಗುಮೂಡಿರುವ ಜೊತೆಗೆ ಆಶಾಭಾವನೆ ಎದ್ದು ಕಾಣುತ್ತಿರೋದು ಸುಳ್ಳಲ್ಲ. ಚಿತ್ರರಂಗದ ಲೆಕ್ಕಾಚಾರಗಳು ನಡೆಯುವುದೇ ಹಾಗೆ, ಒಂದು ಸಿನಿಮಾದ ಗೆಲುವು ಅನೇಕರಿಗೆ ಹೊಸ ಹುರುಪು ತರುತ್ತದೆ. ಹೊಸಬರ, ಹೊಸ ಜಾನರ್‌ನ ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದರೆ, ಆ ತರಹದ ಸಿನಿಮಾ ಮಾಡಲು ಮತ್ತೂಂದಿಷ್ಟು ಮಂದಿ ಮುಂದೆಬರುತ್ತಾರೆ. ಅದಕ್ಕೆ ಕಾರಣ ಈ ಹಿಂದಿನ ಸಿನಿಮಾವೊಂದರ ಯಶಸ್ಸು. ಅದು ಯಾವುದೇ ಚಿತ್ರರಂಗವಾಗಿರಬಹುದು, ಗೆಲುವು ಆಯಾ ಚಿತ್ರರಂಗಕ್ಕೆ ದೊಡ್ಡ ಚೈತನ್ಯವನ್ನು ಒದಗಿಸುತ್ತದೆ.
Related Articles
ಕೆಲವು ಬಿಗ್‌ಬಜೆಟ್ ಸಿನಿಮಾಗಳ ಸಾಲಿನಲ್ಲಿದ್ದ “ವಿಲನ್’ ಮೊಗದಲ್ಲೂ ಈಗ ನಗುಮೂಡಿದೆ. ಸದ್ಯ ಕನ್ನಡ ಚಿತ್ರರಂಗದ
ಪರಿಸ್ಥಿತಿಯಲ್ಲಿ ನೂರು, ಐವತ್ತು ದಿನಗಳ ಸಂಭ್ರಮಕ್ಕಿಂತ ಸಿನಿಮಾ ಮೊದಲ ದಿನ, ಮೊದಲ ವಾರ ಎಷ್ಟು ಚಾಚಿಕೊಂಡಿತು,ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಎಂಬುದಷ್ಟೇ ಮುಖ್ಯವಾಗುತ್ತದೆ. ಈ ತರಹದ ದೊಡ್ಡ ಮಟ್ಟದ ಕಲೆಕ್ಷನ್‌ಗಳಲ್ಲಿ ಹೈಪ್ ಹಾಗೂ ದುಬಾರಿ ಟಿಕೆಟ್ ಬೆಲೆಗಳು ಕೂಡಾ ಸೇರಿರುತ್ತವೆ ಎಂಬುದನ್ನು ಅಲ್ಲಗಳೆಯುವುದಿಲ್ಲ. “ಬೇರೆ ಭಾಷೆಯ ಸ್ಟಾರ್‌ಗಳ ಸಿನಿಮಾಗಳಿಗೆ ಸಾವಿರಗಟ್ಟಲೇ ಕೊಟ್ಟು ನೋಡುವ ನಮ್ಮ ಪ್ರೇಕ್ಷಕರು ವರ್ಷಕ್ಕೊಂದು ಬಾರಿ ಕನ್ನಡ ಸಿನಿಮಾಕ್ಕೆ ಒಂದೈವತ್ತು, ನೂರು ರೂಪಾಯಿ ಹೆಚ್ಚು ಕೊಟ್ಟು ನೋಡಿದರೆ ತಪ್ಪಾ’ ಎಂದು ಪ್ರಶ್ನಿಸುತ್ತಲೇ ಕಲೆಕ್ಷನ್ ಲೆಕ್ಕ ಮುಂದಿಡುತ್ತಾರೆ ವಿತರಕರು.
Advertisement
ಇಲ್ಲಿ ಹೆಚ್ಚಿನ ಟಿಕೆಟ್ ಬೆಲೆ, ಸಿನಿಮಾದ ಹೈಪ್ ಎಲ್ಲವನ್ನು ಬದಿಗಿಟ್ಟು ನೋಡುವುದಾದರೆ ಕನ್ನಡ ಚಿತ್ರರಂಗದಲ್ಲಿ ಕಾಸಿದೆ. ಅದನ್ನು ನಿಮಗೆ ಹೊರತೆಗೆಯುವ ಜಾಣ್ಮೆ ನಿಮಗೆ ಗೊತ್ತಿರಬೇಕಷ್ಟೇ. ನೀವು ಒಳ್ಳೆಯ, ಬಿಗ್‌ಬಜೆಟ್ ಸಿನಿಮಾ ಮಾಡಿದರೂ ಪ್ರೇಕ್ಷಕ ನಿಮ್ಮ ಕೈ ಹಿಡಿಯುತ್ತಾನೆ ಎಂಬುದು ಆಗಾಗ ಹಲವು ಸಿನಿಮಾಗಳ ಮೂಲಕ ಸಾಬೀತಾಗುತ್ತಲೇ ಇದೆ. ಕನ್ನಡ ಚಿತ್ರರಂಗದ ಪ್ರಮುಖ ವಿತರಕರಲ್ಲೊಬ್ಬರಾದ ಜಯಣ್ಣ ಹೇಳುವಂತೆ, ಯಾವುದೇ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಅದರ ಲಾಭ ಕನ್ನಡ ಚಿತ್ರರಂಗಕ್ಕೆ ಲಾಭವಾಗುತ್ತದೆ. ಪಕ್ಕಾ ಪ್ಲ್ರಾನ್ ಮಾಡಿ ಸಿನಿಮಾ ಬಿಡುಗಡೆ ಮಾಡಿದರೆ ಹಾಕಿದ ಕಾಸು ತೆಗೆಯುವಲ್ಲಿ ಕನ್ನಡ ಚಿತ್ರರಂಗ ಮೋಸ ಮಾಡಿಲ್ಲ. 30-40 ಕೋಟಿ ಬಜೆಟ್ ಸಿನಿಮಾ ಮಾಡಿದರೂ ವಾಪಾಸ್ ಹಣ ಬರುತ್ತದೆ ಎಂಬ ನಂಬಿಕೆ ಸದ್ಯ ಕನ್ನಡ ಚಿತ್ರರಂಗದ ಮೇಲಿದೆ. ಇದೇ ಮಾತನ್ನು ನಿರ್ಮಾಪಕ ಕಂ ವಿತರಕ ಜಾಕ್ ಮಂಜು ಹೇಳುತ್ತಾರೆ. “ಯಾವುದೇ ಹೀರೋನಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದಾಗ ಚಿತ್ರರಂಗಕ್ಕೊಂದು ಚೈತನ್ಯ ಬರುತ್ತದೆ. ಮತ್ತಷ್ಟು ನಿರ್ಮಾಪಕರು ದೊಡ್ಡ ಸಿನಿಮಾಗಳನ್ನು ಮಾಡಲು ಮುಂದೆ ಬರುತ್ತಾರೆ’ ಎನ್ನುವುದು ಅವರ ಮಾತು.
ಸದ್ಯ ಕನ್ನಡ ಚಿತ್ರರಂಗದಲ್ಲಿ ಇನ್ನೊಂದಷ್ಟು ಬಿಗ್ ಬಜೆಟ್‌ನ ಚಿತ್ರಗಳು ಬಿಡುಗಡೆಗೆ ಹಾಗೂ ಸೆಟ್ಟೇರಲು ತಯಾರಾಗಿವೆ. ಈ ಚಿತ್ರಗಳನ್ನು ಕೂಡಾ ಕನ್ನಡ ಪ್ರೇಕ್ಷಕ ಎರಡೂ ಕೈಗಳಿಂದ ಅಪ್ಪಿಕೊಳ್ಳುತ್ತಾನೆ ಎಂಬ ವಿಶ್ವಾಸ ಚಿತ್ರತಂಡ ಹಾಗೂ ಅಭಿಮಾನಿಗಳದ್ದು.
– ರವಿಪ್ರಕಾಶ್ ರೈ