Advertisement

ರಸ್ತೆ ಒತ್ತುವರಿ ತೆರವಿಗಾಗಿ ಗ್ರಾಮಸ್ಥರ ಪ್ರತಿಭಟನೆ

03:37 PM Jul 04, 2022 | Team Udayavani |

ಬೇಲೂರು: ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿರು ವುದನ್ನು ತೆರವುಗೊಳಿಸಬೇಕೆಂದು ಬಿರಣಗೋಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಕಳ್ಳೇರಿ ಗ್ರಾಪಂ ವ್ಯಾಪ್ತಿಯ ಬಿರಣಗೋಡು ಗ್ರಾಮದ ಸರ್ವೆ ನಂಬರ್‌ 47 ರಲ್ಲಿ ಮೊಗಪ್ಪಗೌಡ ಎಂಬುವವರು ಸುಮಾರು 20 ನಿವೇಶನಗಳ ನ್ನು ಮಾರಾಟ ಮಾಡಿದ್ದು, ಅದರಲ್ಲಿ ಹುಚ್ಚೇಗೌಡ ಎಂಬುವವರಿಗೆ ನಿವೇಶನ ಮಾರಾಟ ಮಾಡುವಾಗ ರಸ್ತೆಯನ್ನು ಸೇರಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ರಸ್ತೆ ತೆರವುಗೊಳಿಸಿ: ಈ ವೇಳೆ ಮಾತನಾಡಿದ ಕುಮಾರ್‌, ಸುಮಾರು 70 ವರ್ಷದಿಂದ 30ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಹಿಂದೆ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ 20 ಅಡಿ ರಸ್ತೆಯನ್ನು ಸಾರ್ವಜನಿಕರಿಗೆ ತಿರುಗಾಟಕ್ಕೆ ಬಿಟ್ಟಿದ್ದರು. ಆದ ರೆ, ಏಕಾಏಕಿ ಹುಚ್ಚೇಗೌಡ ಎಂಬುವವರಿಗೆ ಈ ರಸ್ತೆಯ 10 ಅಡಿ ಜಾಗವನ್ನು ಸೇರಿ ಈ ಖಾತೆ ಗ್ರಾಪಂನಿಂದ ಮಾಡಿಕೊಟ್ಟಿದ್ದು ಇದರಲ್ಲಿ ಗ್ರಾಪಂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.  ಕೂಡಲೇ ರಸ್ತೆ ತೆರವುಗೊಳಿಸದಿದ್ದಲ್ಲಿ ಗ್ರಾ ಪಂ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ರಾತ್ರಿ ವೇಳೆ ರಸ್ತೆಗೆ ಬೇಲಿ: ನಿವೇಶನದಾರರಾದ ಸುಮಾ, ನಾಜಿಯಾ ಮಾತನಾಡಿ, ಗ್ರಾಪಂನಿಂದ ಇಲ್ಲಿವರೆಗೆ ರಸ್ತೆ ವಿದ್ಯುತ್‌ ದೀಪ, ಹಾಗೂ ಒಳ ಚರಂಡಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಕೇವಲ ಒಬ್ಬರ ಸ್ವಾರ್ಥಕ್ಕಾಗಿ ಸಾರ್ವಜನಿಕರು ತಿರುಗಾಡುವ ರಸ್ತೆಯನ್ನೇ ಅತಿಕ್ರಮಣ ಮಾಡಿಕೊಂಡಿದ್ದು, ರಾತ್ರಿ ಸಮಯದಲ್ಲಿ ರಸ್ತೆಗೆ ಬೇಲಿ ಹಾಕಿದ್ದಾರೆ. ಇದರಿಂದ ವೃದ್ಧರು ಹಾಗೂ ಯಾವುದೇ ವಾಹನಗಳು ಒಳ ಬರದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.

ಬೇಲಿ ತೆರವು ಮಾಡುತ್ತೇವೆ: ನಿವೇಶನ ನೀಡುವಾಗ 20 ಅಡಿ ರಸ್ತೆಯಿದೆ ಎಂದು ನಮಗೆ ಖಾತೆ ಮಾಡಿಕೊಟ್ಟಿದ್ದಾರೆ. ಆದರೆ ಈಗ ರಸ್ತೆಯನ್ನೇ ಸಂ ಪೂರ್ಣ ಬಂದ್‌ ಮಾಡಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಗ್ರಾಪಂಗೆ ಮನವಿ ಮಾ ಡಿದ್ದರೂ ಸಹ ಗಮನ ಹರಿಸಿಲ್ಲ. ನಾವೇ ಅಡ್ಡಹಾಕಿರುವ ಬೇಲಿ ತೆರವುಗೊಳಿಸುತ್ತೇವೆ. ನಮಗೆ ಮುಂದೆ ಯಾವುದೇ ತೊಂದರೆಯಾದರೂ ಈ ನಿವೇಶನದ ಮಾಲಿ ಕರೇ ಹೊಣೆಯಾಗುತ್ತಾರೆ. ಇದರ ಬಗ್ಗೆ ಗಮ ನಹರಿಸಿ ನಮಗೆ ಶಾಶ್ವತ ಪರಿಹಾರ ನೀಡಬೇಕು.ಇಲ್ಲದಿದ್ದರೆ, ಸೋಮ ವಾರ ಗ್ರಾಪಂ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

Advertisement

ಮೇಲಾಧಿಕಾರಿಗಳ ಗಮನಕ್ಕೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಡಿಒ ರಮೇಶ್‌ ಮಾತನಾಡಿ, ತಿರುಗಾಡಲು ರಸ್ತೆಯನ್ನು ಗುರುತು ಮಾಡಲಾ ಗಿದೆ. ನೆರೆಹೊರೆಯವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿ ಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರುದ್ರೇಶ್‌, ಮಹೇಶ್‌, ಸ್ಥಳೀಯ ನಿವಾಸಿಗಳಾದ ಮಂಜುನಾಥ್‌,ಶಾರದಮ್ಮ ಸಮೀನಾ, ಸುಮಾ, ನಸ್ರೀನ್‌, ಶಾಂತಮ್ಮ, ತನ್ವೀರ್‌, ಪರ್ವೀನ್‌, ಅಸ್ಲಾಮ್‌, ಮೊಗಣ್ಣಗೌಡ, ಅಲೀ, ಅಬ್ಬು, ಶಬ್ಬೀರ್‌ ಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next