ಮಂಡ್ಯ: ಅಕ್ರಮ ಕಟ್ಟಡ ನಿರ್ಮಾಣ ಮಾಡಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುತ್ತಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಶ್ರೀರಂಗ ಪಟ್ಟಣ ತಾಲೂಕು ಕೋಡಿ ಶೆಟ್ಟಿಪುರ ಗ್ರಾಮಸ್ಥರು ನಗರ ದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಗ್ರಾಮಸ್ಥರು, ಕೆಲ ವೇಳೆ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗ್ರಾಮ ಠಾಣಾ ಸ್ಥಳದಲ್ಲಿ ಅಕ್ರಮವಾಗಿ ಕೆ.ಎಸ್.ನಾಗ ರಾಜು ಎಂಬುವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ , ಗ್ರಾಮ ಪಂಚಾಯಿತಿಗೆ, ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ತಡೆಯಾಜ್ಞೆಗೂ ಬೆಲೆಯಿಲ್ಲ: ಸ್ಥಳೀಯ ಮಟ್ಟ ದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ನ್ಯಾಯಾಲಯದ ಮೆಟ್ಟಿಲು ಏರುತ್ತವೆ. ಸ್ಥಳೀಯವಾಗಿ ನ್ಯಾಯಾಲಯ ದಿಂದಲೂ ನಾಗರಾಜು ಕಟ್ಟಡ ನಿರ್ಮಾಣ ಮಾಡದಂತೆ ತಡೆಯಾಜ್ಞೆ ನೀಡಿರುತ್ತದೆ. ಇದನ್ನೂ ಲೆಕ್ಕಿಸದೆ ಪುನಃ ಕಟ್ಟ ಡ ನಿರ್ಮಾಣ ಕಾರ್ಯದಲ್ಲಿ ನಾಗ ರಾಜು ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಆಗ ಮಿ ಸಿದ ಪೊಲೀಸರು ಯಾವುದೇ ಪರಿಶೀಲನೆ ಯನ್ನೂ ನಡೆಸದೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ನ್ಯಾಯಾಯಲಯದ ಆದೇಶವನ್ನೂ ಲೆಕ್ಕಿಸದ ಅಧಿಕಾರಿಗಳು ಮತ್ತು ಪೊಲೀಸರ ವರ್ತನೆಯಿಂದ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದರು.
ಜಿಲ್ಲಾಡಳಿತವೇ ಹೊಣೆ : ಶಾಂತಿ ಸುವ್ಯವಸ್ಥೆ ಕಾಪಾಡ ಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗುತ್ತಿರುವ ಬೆಳ ವಣಿಗೆಯಿಂದ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಅಶಾಂತಿ ಹಾಗೂ ಅಹಿತಕರ ಘಟನೆಗಳು ಸಂಭವಿಸಿದರೆ ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿ ದರು. ಈಗಾಗಲೇ ಅಕ್ರಮ ಕಟ್ಟಡಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಮತ್ತು ಛಾಯಾಚಿತ್ರವನ್ನು ಲಗತ್ತಸಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಲಂಕುಶವಾಗಿ ನ್ಯಾಯಾಲಯದ ಆದೇಶವನ್ನು ತನಿಖೆ ಮಾಡಬೇಕು ಎಂದು ಮನವಿ ಮಾಡಿದರು.
ಅಶಾಂತಿ ವಾತಾವರಣ: ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವನಾಗ ರಾಜು ಅವರ ಸಂಬಂಧಿಕ ರಾದ ಕೆ.ಎಂ. ಮಲ್ಲೇಶ ಮತ್ತು ನಿವೃತ್ತ ಆರ್.ಐ. ಹೊನ್ನೇ ಗೌಡ ಗ್ರಾಮ ದಲ್ಲಿ ಗುಂಪು ಕಟ್ಟಿ ಕೊಂಡು ಅಶಾಂತಿ ಯ ವಾತಾ ವರಣ ಸೃಷ್ಟಿಸಲು ಹೊರಟಿದ್ದಾರೆ. ತಕ್ಷಣ ಅಧಿಕಾರಿಗಳು ಕ್ರಮ ಕೈಗೊಂಡು ಮುಂದಾ ಗುವ ಅನಾಹುತಗಳನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ. ಗ್ರಾಪಂ ಸದಸ್ಯ ಕೆ.ಕೆ.ಸತೀಶ್, ಮುಖಂಡ ರಾದ ಮಂಜು, ಗವಿ ರಂಗ, ಚಂದ್ರ, ದೇವ ರಾಜು, ಕೆ.ಜೆ. ಸುಂದರ, ತಮ್ಮಣ್ಣ, ವೆಂಕ ಟೇಶ್ ಇತರರು ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದರು.