Advertisement

ಬಳಕೆಯಾಗದ ಅಂಬೇಡ್ಕರ್‌ ಭವನಗಳಲ್ಲಿ “ಗ್ರಾಮ ಗ್ರಂಥಾಲಯ’

10:45 PM Sep 21, 2022 | Team Udayavani |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಪೂರ್ಣಗೊಂಡು ಬಳಕೆಯಾಗದೆ ಉಳಿದಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಭವನಗಳನ್ನು ಗ್ರಾಮ ಗ್ರಂಥಾಲಯ’ಗಳನ್ನಾಗಿ ಪರಿವರ್ತಿಸಲು ಹೊಸ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿ ತಿಳಿಸಿದರು.

Advertisement

422 ವಾರ್ಡನ್‌ಗಳ ನೇಮಕ
2014-15ರ ಅಂತ್ಯಕ್ಕೆ ರಾಜ್ಯದಲ್ಲಿ ಖಾಲಿ ಇರುವ 1,142 ಹಾಸ್ಟೆಲ್‌ ವಾರ್ಡನ್‌ಗಳ ಹುದ್ದೆಗಳ ಪೈಕಿ 422 ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಮೂಲಕ ಭರ್ತಿಗೆ ಕ್ರಮ ಕೈಗೊಳ್ಳಲಾಯಿತು. ಇದರಲ್ಲಿ 221 ಹಾಸ್ಟೆಲ್‌ ವಾರ್ಡನ್‌ ಹುದ್ದೆಗಳಿಗೆ ಕೌನ್ಸಿಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಮಾಡಲಾಗಿದೆ. ಕೆಪಿಎಸ್‌ಸಿ ಆಯ್ಕೆ ಪಟ್ಟಿಯಲ್ಲಿ ಹುದ್ದೆ ನಿರಾಕರಿಸಿರುವ ಅಭ್ಯರ್ಥಿಗಳ ಬದಲಾಗಿ ಹೆಚ್ಚುವರಿ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆಯುಕ್ತಾಲಯಕ್ಕೆ ಪಟ್ಟಿ ಕಳಿಸಿಕೊಡಲು ಆಯೋಗಕ್ಕೆ ಪತ್ರ ಬರೆಯಲಾಗಿದೆ.

ಹೆಚ್ಚುವರಿ ಪಟ್ಟಿ ಸಿಕ್ಕ ಕೂಡಲೇ ನಿಯಮಾನುಸಾರ ವಾರ್ಡನ್‌ಗಳನ್ನು ಸ್ಥಳ ನಿಯುಕ್ತಿ ಮಾಡಲಾಗುವುದು. ಹುದ್ದೆಗಳ ಭರ್ತಿ ಆಗುವ ತನಕ ಹೊಗುತ್ತಿಗೆ ಆಧಾರದಲ್ಲಿ ವಾರ್ಡನ್‌ಗಳ ನೇಮಕಾತಿ ಬಗ್ಗೆ ಶಾಸಕರ ಮಾಡಿರುವ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಸಚಿವ ಕೋಟ ಅವರು ಬಿಜೆಪಿ ಶಾಸಕ ಕುಮಾರ ಬಂಗಾರಪ್ಪ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next