Advertisement

ಹುಲಕೋಟಿ ಕೃಷಿ ಮೇಳದಲ್ಲಿ ಹಳ್ಳಿ ಚಿತ್ರಣ

01:22 PM Jan 29, 2020 | Suhan S |

ಗದಗ: ಹುಲಕೋಟಿಯ ಕೈಲಾಸ ಆಶ್ರಮದ 28ನೇ ವಾರ್ಷಿಕೋತ್ಸವ ಅಂಗವಾಗಿ ಐಸಿಎಆರ್‌- ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆಯ ಆತ್ಮಾ ಯೋಜನೆಯಡಿ ಆಶ್ರಮದ ಆವರಣದಲ್ಲಿ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ರೈತರು ಹಾಗೂ ಸಾರ್ವಜನಿಕರ ಮನ ಸೆಳೆಯಿತು.

Advertisement

ಕೃಷಿ ಮೇಳದಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಮುಖ ಆಕರ್ಷಣೀಯವಾಗಿತ್ತು. ಸುಮಾರು 10×15 ಅಡಿ ವಿಸ್ತೀರ್ಣದ ಮಾದರಿ ಇಡೀ ಹಳ್ಳಿಯ ಸಮಗ್ರ ಚಿತ್ರಣವನ್ನೇ ಕಟ್ಟಿಕೊಟ್ಟಿತು. ಮಳೆ ನೀರು ನೇರವಾಗಿ ಹರಿದು ಹೋಗದಂತೆ ತಡೆಯಲು ಅಲ್ಲಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿತ್ತು. ಜೊತೆಗೆ ಬೋರ್‌ ವೆಲ್‌ ಹಾಗೂ ಬಾವಿಗಳಿಗೆ ಜಲ ಮರು ಪೂರಣ, ಕೃಷಿ ಕ್ಷೇತ್ರದ ವಿಸ್ತರಣೆ, ಹನಿ ನೀರಾವರಿ ಪದ್ಧತಿಯಲ್ಲಿ ಕೃಷಿ ಮಾಡುವ ವಿಧಾನ, ಹೈನುಗಾರಿಕೆ, ಮೀನುಗಾರಿಕೆ, ಜನವಸತಿಗಳು, ಜಾನುವಾರುಗಳಿಗೆ ಕುಡಿಯುವ ನೀರು ಲಭ್ಯಗೊಳಿಸುವ ವಿಧಾನ ಮನ ಸೆಳೆಯಿತು. ಅದರೊಂದಿಗೆ ಮೇರವಾಡೆ ಅಗ್ರಿ ಟೆಕ್‌ ಅವರ ಕೃಷಿ ಕ್ರಾಂತಿ ಮಷಿನ್‌ ರೈತರಲ್ಲಿ ಬೆರಗು ಮೂಡಿಸಿತು. ಸುಮಾರು ಐದು ಅಡಿ ಎತ್ತರದ ಈ ಯಂತ್ರವನ್ನು ಎಡಿ ಹೊಡೆಯಲು ಮತ್ತು ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆಗೆ ಬಳಸಿಕೊಳ್ಳಬಹುದಾಗಿದೆ. ತ್ರಿಚಕ್ರಗಳನ್ನು ಹೊಂದಿರುವ ಈ ಯಂತ್ರ ಸುಮಾರು ಮೂರ್‍ನಾಲ್ಕು ಅಡಿಯಷ್ಟು ಎತ್ತರವಿರುವ ಬೆಳೆ ಮಧ್ಯೆಯೂ ಎಡೆ ಹೊಡೆಯುಬಹುದಾಗಿದೆ.

ಜೊತೆಗೆ ಕೃಷಿ ಯಂತ್ರೋಪಕರಣಗಳಾದ ಮಿನಿ ಟ್ರ್ಯಾಕ್ಟರ್‌, ರೋಟೋ ವೀಡರ್‌, ಬ್ರಷ್‌ ಕಟ್ಟರ್‌, ಕಳೆ ತೆಗೆಯುವ ಸಾಧನ, ಹಾಲು ಕರೆಯುವ ಯಂತ್ರ, ಕಾಳು ಸ್ವತ್ಛ ಮಾಡುವ ಯಂತ್ರ ಹಾಗೂ ರೈತರನ್ನು ಕೈ ಬೀಸಿ ಕರೆಯುತ್ತಿದ್ದವು. ಮಣ್ಣಿನ ಫಲವತ್ತತೆ ಹಾಗೂ ಸಾವಯವ ಕೃಷಿ ತಾಂತ್ರಿಕತೆಗಳು, ಪಶು ಸಂಗೋಪನೆ ತಂತ್ರಜ್ಞಾನಗಳು, ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧನೆ ಮಳಿಗೆಗಳು ನೋಡುಗರಿಂದ ತುಂಬಿದ್ದವು. ಆಯಾ ಮಳಿಗೆಗಳಲ್ಲಿ ಪರ್ಯಾಯ ಭೂ ಬಳಕೆ ಪದ್ಧತಿಗಳು, ಒಣ ಬೇಸಾಯದಲ್ಲಿ ತೋಟಗಾರಿಕೆ, ತರಕಾರಿ ಹಾಗೂ ಹೂವಿನ ಬೇಸಾಯ, ಸಾವಯವ ಕೃಷಿ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಿರಿಧಾನ್ಯಗಳ ಮಹತ್ವ ಹಾಗೂ ಆಹಾರದಲ್ಲಿ ಅವುಗಳ ಉಪಯೋಗ, ಹೈನುಗಾರಿಕೆ ತಂತ್ರಜ್ಞಾನಗಳು, ಶ್ರಮ ಕಡಿಮೆ ಮಾಡುವ ಸಾಧನಗಳು ಮುಂತಾದ ವಿಷಯಗಳ ಕುರಿತ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತು.

ಕೈಲಾಸ ಆಶ್ರಮದಲ್ಲಿ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನವನ್ನು ಶಾಸಕ ಎಚ್‌.ಕೆ.ಪಾಟೀಲ ಉದ್ಘಾಟಿಸಿದರು. ಜಯೇಂದ್ರಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜ| ತೋಟಂದ ಸಿದ್ದರಾಮ ಸ್ವಾಮೀಜಿ, ಜ| ಅಭಿನವ ಶಿವಾನಂದ ಸ್ವಾಮೀಜಿ, ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಜ| ಫಕೀರ ಸಿದ್ಧರಾಮ ಸ್ವಾಮೀಜಿ, ಜ| ಅಭಿನವ ಬೂದೀಶ್ವರ ಸ್ವಾಮೀಜಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next