Advertisement
ಇದು ಹೇಗಿರುತ್ತದೆ ಅಂದಿರಾ? ಇದು, 15ಸೆಂ.ಮೀ ಉದ್ದದ, ಕೆಳಮುಖವಾಗಿ ಬಾಗಿರುವ ಸಪೂರಾದ ಕೊಕ್ಕಿನ ಹಕ್ಕಿ. ಈ ವಿಶಿಷ್ಟ ರೂಪವೇ ಅದನ್ನು ಗುರುತಿಸಲು ನೆರವಾಗುತ್ತದೆ. ಊರ ಕೋಳಿಯಷ್ಟು ದೊಡ್ಡದಿದ್ದು ದಪ್ಪನಾಗಿರುತ್ತದೆ. ಇದರ ರೆಕ್ಕೆಯ ಅಗಲ ಬಿಚ್ಚಿದಾಗ 89 ಸೆಂ.ಮೀ ದಿಂದ 106 ಸೆಂ.ಮೀ. ತನಕ ದೊಡ್ಡದಾಗಿರುತ್ತದೆ. ದೇಹದ ಬಣ್ಣ ಬೂದು, ಕೆಂಪು ಮತ್ತು ಬಿಳಿಯ ಗೆರೆಗಳ ಚಿತ್ತಾರದಿಂದ ಕೂಡಿರುತ್ತದೆ.
Related Articles
Advertisement
ಹವಾಮಾನ ವ್ಯತ್ಯಾಸ ತಿಳಿದುಕೊಳ್ಳಲು ಈ ಹಕ್ಕಿಗಳಲ್ಲಿರುವ ಯಾವ ಅಂಗ, ಇಲ್ಲವೆ ಯಾವುದು ಅವುಗಳಿಗೆ ತಿಳಿಯಲು ಸಹಾಯಕವಾಗಿದೆ ಎಂಬುದೂ ತಿಳಿದಿಲ್ಲ. ತಿಳಿದಿದ್ದರೆ ಹವಾಮಾನದ ಏರು ಪೇರು, ಸುಂಟರ ಗಾಳಿಗಳಿಂದ ನಮಗೆ ಬರುವ ಅಪಾಯ ತಪ್ಪಿಸ ಬಹುದಾಗಿತ್ತೋ ಏನೋ? !
ಏಪ್ರಿಲ್, ಮೇ ತಿಂಗಳಲ್ಲಿ ಇವು ಉತ್ತರಕ್ಕೆ ಪ್ರಯಾಣ ಬೆಳೆಸಿ- ಬೇಸಿಗೆಯ ಹೊತ್ತಿಗೆ ತಮ್ಮ ಮೂಲ ಸ್ಥಾನ ಸೇರುತ್ತವೆ. ಅಲ್ಲಿ ಹುಲ್ಲು, ಕಸ ಸೇರಿಸಿ ನೆಲಮಟ್ಟದಲ್ಲಿಗೂಡು ಕಟ್ಟುತ್ತವೆ. ಅದರಲ್ಲಿ ತಿಳಿ ಕಂದುಬಣ್ಣದ, ಅಚ್ಚ ಕಂದು ಚುಕ್ಕೆಗಳಿರುವ 3 ರಿಂದ 6 ಮೊಟ್ಟೆ ಇಡುತ್ತವೆ. ತಿಂಗಳುಗಳ ಕಾಲ ಕಾವುಕೊಟ್ಟು ಮರಿಮಾಡುತ್ತವೆ.
ಕೆಲವೊಮ್ಮೆ ಸಮುದ್ರದ ತೀರದಲ್ಲಿ ಗುಂಪಾಗಿ ಇದ್ದು ತೆರೆಗಳು ಬಂದು ಹಿಂದೆ ಹೋಗುವಾಗ ಅಲ್ಲಿರುವ ಹುಳಗಳನ್ನು ಆರಿಸಿ ತಿನ್ನುತ್ತವೆ. ಮರಿಮಾಡುವ ಸಮಯದಲ್ಲಿ, ಸಂಗಾತಿಯನ್ನು ಕರೆಯುವಾಗ, ಮರಿಗಳ ರಕ್ಷಣೆಗೆ ಕರೆಯುವಾಗ, ಇಲ್ಲವೇ ತಮ್ಮ ಟೆರಿ ಟರಿ ಅಂತ ಘೋಷಿಸುವಾಗ ಇವು ತೆಗೆಯುವ ದನಿಗಳು ಅಧ್ಯಯನ ನಡೆಯುವ ವಿಚಾರವಾಗಿದೆ. ಈ ಸುಂದರ ಪಕ್ಷಿ ಸಂಕುಲವನ್ನು ಉಳಿಸಬೇಕಾದರೆ-ಇವುಗಳು ವಲಸೆ ಬಂದಾಗ ಉಳಿಯುವ ಇರುದಾಣಗಳನ್ನು ಉಳಿಸಬೇಕು. ಸಮುದ್ರತೀರ, ಜೌಗು ಪ್ರದೇಶದಲ್ಲಿ ಇವುಗಳಿಗೆ ರಕ್ಷಣೆ ಸಿಗುವಂತಾಗಬೇಕು.