Advertisement

ನೆರೆ ಪರಿಹಾರ ವಿತರಣೆಯಲ್ಲಿ ಅಕ್ರಮ ನಡೆಸಿದ ಮೂವರು ಗ್ರಾಮ ಲೆಕ್ಕಿಗರ ಅಮಾನತು

09:44 AM Mar 20, 2020 | keerthan |

ಬೆಳಗಾವಿ: ಕಳೆದ ವರ್ಷ ಉಂಟಾದ ಪ್ರವಾಹ ಮತ್ತು ಅತಿವೃಷ್ಠಿಯಿಂದ ಆದ ಬೆಳೆಹಾನಿಯ ಪರಿಹಾರ ವಿತರಿಸುವಲ್ಲಿ ಅಕ್ರಮ ನಡೆಸಿದ ರಾಯಬಾಗ ತಾಲೂಕಿನ ಮೂವರು ಗ್ರಾಮ ಲೆಕ್ಕಿಗರನ್ನು ಅಮಾನತುಗೊಳಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

ರಾಯಬಾಗ ತಾಲೂಕಿನ ಭಿರಡಿ ಗ್ರಾಮ ಲೆಕ್ಕಿಗ ಬಿ.ಪಿ.ಹಳ್ಳಿ, ಜಲಾಲಪೂರದ ಪಿ.ಎಂ.ಹಾಲವಡೆರ್ ಮತ್ತು ದಿಗ್ಗೆವಾಡಿಯ ಎಸ್.ಎ.ಬಸ್ತವಾಡೆ ಅವರನ್ನು ಅಪರ ಜಿಲ್ಲಾಧಿಕಾರಿ ಆಮಾನತುಗೊಳಿಸಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡದಂತೆ ಸೂಚಿಸಿದ್ದಾರೆ.

ಬೆಳೆ ಪರಿಹಾರದಲ್ಲಿ ಅಕ್ರಮ ಎಸಗಿದ ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಜರುಗಿಸಲು ಸಮಗ್ರ ವರದಿ ನೀಡುವಂತೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಯವರು ರಾಯಬಾಗ ತಹಶೀಲ್ದಾರ ಅವರಿಗೆ ತಿಳಿಸಿದ್ದರು. ಅದರಂತೆ ತಹಶೀಲ್ದಾರ ಅವರು ನಡೆಸಿದ ತನಿಖೆಯಲ್ಲಿ, ಬೆಳೆ ಪರಿಹಾರಕ್ಕೆ ಸಂಬಂಧಪಟ್ಟಂತೆ ರಾಯಬಾಗ ತಾಲೂಕಿನಲ್ಲಿ ಒಟ್ಟು 799 ತಾಳೆಯಾಗದ ಪ್ರಕರಣಗಳು ಪತ್ತೆಯಾಗಿದ್ದವು. ಅವುಗಳಲ್ಲಿ 65 ಪ್ರಕರಣಗಳಲ್ಲಿ ಗ್ರಾಮ ಲೆಕ್ಕಿಗರು ದುರುದ್ದೇಶದಿಂದ ಫಲಾನುಭವಿಗಳನ್ನು ಹೊರಗಿಟ್ಟು, ಅನ್ಯ ವ್ಯಕ್ತಿಗಳ ಖಾತೆಗೆ ಹಣ ವರ್ಗಾಯಿಸಿರುವುದು ಕಂಡು ಬಂದಿತ್ತು.

ಭಿರಡಿ ಗ್ರಾಮ ಲೆಕ್ಕಿಗ 6 ಪ್ರಕರಣಗಳಲ್ಲಿ, ಜಲಾಲಪೂರ ಗ್ರಾಮ ಲೆಕ್ಕಿಗ 8 ಪ್ರಕರಣಗಳಲ್ಲಿ ಮತ್ತು ದಿಗ್ಗೇವಾಡಿಯ ಗ್ರಾಮ ಲೆಕ್ಕಿನ ಒಟ್ಟು 51 ಪ್ರಕರಣಗಳಲ್ಲಿ ಪರಿಹಾರದ ಹಣವನ್ನು ಫಲಾನುಭವಿಗಳಲ್ಲದೆ ಇನ್ನೊಬ್ಬರ ಖಾತೆಗೆ ವರ್ಗಾಯಿಸಿರುವುದು ಪತ್ತೆಯಾಗಿದ್ದು, ಅನರ್ಹ ಫಲಾನುಭವಿಗಳಿಗೆ ಬೆಳೆ ಪರಿಹಾರದ ಹಣ ಸಂದಾಯ ಮಾಡಿ ಅವ್ಯವಹಾರ ನಡೆಸಿರುವುದು ಸಾಬೀತಾಗಿದೆ.

ಪರಿಹಾರ ವಿತರಣೆಯಲ್ಲಿ ನಡೆದ ಲೋಪಗಳಿಗೆ ಸಂಬಂಧಪಟ್ಟಂತೆ ಖಾಸಗಿ ಆಪರೇಟರಗಳು, ಅವರಿಗೆ ಸಹಕರಿಸಿದ ವ್ಯಕ್ತಿಗಳು ಮತ್ತು ಅಕ್ರಮವಾಗಿ ಹಣ ಮಾಡಿಕೊಂಡ ಅನ್ಯ ವ್ಯಕ್ತಿಗಳ ವಿರುದ್ಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next