ಮುಂಬಯಿ: ಕನ್ನಡಿಗರ ಆತ್ಮೀಯತೆ ಮತ್ತು ಅವಿಭಜಿತ ಜಿಲ್ಲೆಗಳ ಹಾಗೂ ವಿಶೇಷವಾಗಿ ತುಳುನಾಡಿನ ಅಭಿಮಾನ ನನ್ನನ್ನು ಈ ಒಂದು ಕಾರ್ಯಕ್ರಮಕ್ಕೆ ಆಕರ್ಷಿತು. ಕಾರಣ ನಾನು ರಾಜಕಾರಣಿಯಾಗಿ ಇಷ್ಟೊಂದು ಎತ್ತರಕ್ಕೆ ಬೆಳೆಯಲು ನಿಮ್ಮ ಅಭಿಮಾನ ನನಗೆ ಶಕ್ತಿ ನೀಡಿದೆ. ಸದ್ಯದ ರಾಜಕೀಯ ಸ್ಥಿತಿಗತಿ ನೀವು ತಿಳಿದಿದ್ದೀರಿ. ಆ ಬಗ್ಗೆ ಪ್ರಸ್ತಾವಿಸಲಾರೆ. ನೋಟು ಅಪಮೌಲ್ಯ ಮತ್ತು ಜಿಎಸ್‌ಟಿ ಜಾರಿಯಿಂದ ಅನೇಕರಿಗೆ ತೊಂದರೆಯಾಗಿರಬಹುದು.ಆದರೆ ಭವಿಷ್ಯತ್ತಿನ ದಿನಗಳಲ್ಲಿ ಈ ಹಣಕಾಸು ವ್ಯವಸ್ಥೆ ಸಂಪೂರ್ಣವಾಗಿ ಹತೋಟಿಗೆ ಬರಲಿದೆ. ದೊಡª ಯೋಜನೆಗಳಿಂದ ಚಿಕ್ಕಪುಟ್ಟ ಸಮಸ್ಯೆಗಳಾಗುವುದು ಸರ್ವೇ ಸಾಮಾನ್ಯ. ಜಿಎಸ್‌ಟಿ ಜಾರಿಯಿಂದ ಅನುಭವಿಸುತ್ತಿರುವ ಚಿಕ್ಕಪುಟ್ಟ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮಕ್ಕೆ ಪ್ರಯತ್ನಿಸುವೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಅವರು ನುಡಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅ. 10ರಂದು ನಗರಕ್ಕೆ ಆಗಮಿಸಿದ ಸಚಿವ ಗೌಡ ಅವರನ್ನು ಅವರ ಆಪ್ತಮಿತ್ರ ವರ್ಗದವರು, ಬಂಟ ಸಮುದಾಯದ ಉದ್ಯಮಿಗಳ ಒಕ್ಕೂಟ ಸಂಸ್ಥೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಲಿಮಿಟೆಡ್ (ಐಬಿಸಿಸಿಐಎಲ್) ಇದರ ನಿರ್ದೇಶಕ ಕುತ್ಪಾಡಿ ಚಂದ್ರ ಶೆಟ್ಟಿ ಅವರು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿದರು.
ಬಳಿಕ ವಿಲೇಪಾರ್ಲೆ ಪೂರ್ವದ ರಾಮಕೃಷ್ಣ ಹೊಟೇಲ್‌ನ ಶಬರಿ ಸಭಾಗೃಹದಲ್ಲಿ ಚಹಾಕೂಟದಲ್ಲಿ ಪಾಲ್ಗೊಂಡ ಸದಾನಂದ ಗೌಡ ಅವರು ತುಳುಕನ್ನಡಿಗ ಮುಂದಾಳುಗಳ ಸಮ್ಮಾನ ಸ್ವೀಕರಿಸಿ ಮಾತನಾಡಿ, ನೋಟು ಅಪಮೌಲ್ಯದ ಬಗ್ಗೆ ರಾಷ್ಟ್ರದ ಸಂಯುಕ್ತ ಕಾರ್ಪೋರೇಟ್ ಮಟ್ಟದಲ್ಲಿ ವಿಚಾರ ವಿನಿಮಯ ನಡೆಯುತ್ತಿದೆ. ಕೇಂದ್ರ ಸರಕಾರ ಮಾಡಿದ ಆಡಳಿತ ವ್ಯವಸ್ಥೆಗೆ ಸರಿಸಮಾನವಾಗಿ ಮುನ್ನಡೆಸುವ ಜವಾಬ್ದಾರಿ ತಮ್ಮೆಲ್ಲರದ್ದಾªಗಿದೆ. ಮುಂಬಯಿಗರಾದ ನಿಮ್ಮ ವ್ಯವಹಾರಿಕ ವ್ಯವಸ್ಥೆ ಅರಿಯಬಲ್ಲೆ. ಆದುದರಿಂದ ದೇಶದ ಪರಿಸ್ಥಿತಿ ಮಾತನಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಸಮಸ್ಯೆಗಳಿಂದ ಕೂಡಿದ ವ್ಯವಹಾರ, ಜಿಎಸ್‌ಟಿ ಇತ್ಯಾದಿಗಳ ವ್ಯತ್ಯಾಸ ತಾವು ತಿಳಿಯಪಡಿಸಿದರೆ ಪ್ರಧಾನಿಯವರ ಗಮನಕ್ಕೆ ತರುವೆ. ಈ ಹಿನ್ನಲೆಯಲ್ಲೇ ನಾವು ಸಕ್ರಿಯರಾಗಿದ್ದೇವೆ ಎಂದರು.
ಸಮಾಜ ಸೇವಕರು, ಉದ್ಯಮಿಗಳಾದ ಕೆ. ಸಿ. ಶೆಟ್ಟಿ, ರವಿ ಎಸ್. ಶೆಟ್ಟಿ ಸಾಯಿ ಪ್ಯಾಲೇಸ್, ಮಾಜಿ ಶಾಸಕ, ಹಾಲಿ ಬಿಜೆಪಿ ಮುಖಂಡ ಕೃಷ್ಣ ಎಸ್. ಹೆಗ್ಡೆ, ಸುಧೀರ್ ಶೆಟ್ಟಿ, ಬಾಲಕೃಷ್ಣ ಭಂಡಾರಿ, ಆನಂದ್ ವಿ. ಶೆಟ್ಟಿ, ಗುಲ್ಶನ್ ಗಾಂಧಿ, ಎಸ್. ಬಿ. ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಂಖೀÂಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಹಾಯಕ ನಿರ್ದೇಶಕ ಡಾ| ಸಂಜಯ್ ಕುಮಾರ್, ನಗರದ ಉದ್ಯಮಿಗಳಾದ ಪಾಂಡು ಎಸ್. ಶೆಟ್ಟಿ, ಮಹೇಶ್ ಎಸ್. ಶೆಟ್ಟಿ ಬಾಬಾಸ್, ಚಂದ್ರಶೇಖರ ಸುಬ್ಬಯ್ಯ ಶೆಟ್ಟಿ ರಾಮಕೃಷ್ಣ, ನ್ಯಾಯವಾದಿ ಉಪ್ಪೂರು ಶೇಖರ ಶೆಟ್ಟಿ, ಶಂಕರ ಟಿ. ಶೆಟ್ಟಿ, ರಮೇಶ್ ಎನ್. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಎಂ. ಮೂಡಿಗೆರೆ ಮತ್ತಿತರರು ಉಪಸ್ಥಿತರಿದ್ದರು. ದಕ್ಷಿಣ ಭಾರತೀಯ ಮುಂಬಯಿ ಘಟಕದ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್ ಸ್ವಾಗತಿಸಿದರು. ಬಿಜೆಪಿ ಮುಂದಾಳು ವಿಶ್ವನಾಥ್ ಮಾಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೆಳಗ್ಗೆ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ ಸಚಿವರು ಮಹಾರಾಷ್ಟ್ರ ಗಡಿನಾಡ ಗುಜರಾತ್‌ನ ವಲ್ಸಾಡ್ ಜಿಲ್ಲೆಯ ಸಿಲ್ವಸಾದ ರಖೋಲಿ ಸರಕಾರಿ ಶಾಲೆಯಲ್ಲಿ ಜರಗಿದ ಮುದ್ರಾ ಬಡತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮತ್ತೆ ದೆಹಲಿ ತೆರಳುವ ಮುನ್ನ ಸಚಿವರು ತಮ್ಮ ಅತ್ಮೀಯ ಮಿತ್ರರೊಂದಿಗೆ ಸಮಾಲೋಚನೆ ನಡೆಸಿದರು.