Advertisement

Watch Video: ವಿಕ್ರಾಂತ್ ರೋಣದ..ರಾ..ರಾ..ರಕ್ಕಮ್ಮ ಮೊದಲ ಲಿರಿಕಲ್ ಹಾಡು ಬಿಡುಗಡೆ

04:59 PM May 23, 2022 | Team Udayavani |

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಮೊದಲ ಲಿರಿಕಲ್ ಕನ್ನಡ ಹಾಡನ್ನು ಸೋಮವಾರ (ಮೇ 23) ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಒಂದು ಗಂಟೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Advertisement

ವಿಕ್ರಾಂತ್ ರೋಣ ಸಿನಿಮಾ ಜುಲೈ 28ರಂದು ತೆರೆ ಕಾಣಲಿದೆ. ಇದೀಗ ಚಿತ್ರತಂಡ ಭರಾಟೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇಂದು ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿರುವ “ಗಡಂಗ್ ರಕ್ಕಮ್ಮ” ಹಾಡಿಗೆ ಸಖತ್ ಹಾಟ್ ಸ್ಟೆಪ್ ಹಾಕಿರುವ ಕನ್ನಡದ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

ಮೇ 24ರಂದು ಹಿಂದಿಯಲ್ಲಿ, ಮೇ 25ರಂದು ತೆಲುಗಿನಲ್ಲಿ, ಮೇ 26ರಂದು ತಮಿಳಿನಲ್ಲಿ ಹಾಗೂ ಮೇ 27ಕ್ಕೆ ಮಲಯಾಳಂ ಭಾಷೆಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಿಸಿದೆ.

3 ನಿಮಿಷ 43 ಸೆಕೆಂಡುಗಳ ಗಡಂಗ್ ರಕ್ಕಮ್ಮ..ರಾ…ರಾ ಹಾಡಿನಲ್ಲಿ ಜಾಕ್ವೆಲಿನ್, ಕಿಚ್ಚ ಸುದೀಪ್ ಜತೆ ಭರ್ಜರಿಯಾಗಿ ಹೆಜ್ಜೆ ಹಾಕಿದ್ದು, ಹಾಡಿನ ನಡುವೆ ಸಿನಿಮಾ ಚಿತ್ರೀಕರಣದ ತುಣುಕುಗಳನ್ನು ತೋರಿಸಲಾಗಿದೆ.

ವಿಕ್ರಾಂತ್ ರೋಣ 3ಡಿಯಲ್ಲೂ ಮೂಡಿಬರುತ್ತಿದ್ದು, ಈ ಚಿತ್ರಕ್ಕೆ ಶಾಲಿನಿ ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂಧನ್ ರಾವ್ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಅನೂಪ್ ಭಂಡಾರಿ ನಿರ್ದೇಶನ, ಬಿ.ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವಿಲಿಯಂ ಡೇವಿಡ್ ಛಾಯಾಗ್ರಹಣ, ಆಶಿಕ್ ಕುಸುಗೊಳ್ಳಿ ಸಂಕಲನ ಚಿತ್ರಕ್ಕಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next