Advertisement

ಜುಲೈ 8ರಂದು ತೆರೆಗೆ; ವಿಕ್ರಂ ಪ್ರಭು ಕನಸಿನ ಕೂಸು ‘ವೆಡ್ಡಿಂಗ್ ಗಿಫ್ಟ್’

11:52 AM Jul 04, 2022 | Team Udayavani |

ಬೆಂಗಳೂರು: ಬಣ್ಣದ ಲೋಕ ಬಹಳ ಬೇಗವೇ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತೆ. ಆದರೆ ಏನು ಮಾಡಬೇಕು, ನೋಡುಗರಿಗೆ ಏನು ನೀಡಬೇಕು ಎಂಬ ಸ್ಪಷ್ಟತೆ ಇದ್ದರಷ್ಟೇ ಯಶಸ್ವಿಯಾಗಿ ಬಣ್ಣದ ಜಗತ್ತಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೀಗ ಗಂಧದಗುಡಿಯಲ್ಲಿ ಯಶಸ್ಸುಗಳಿಸುವ ನಿರೀಕ್ಷೆಯನ್ನೊತ್ತು ಹೊಸ ನಿರ್ದೇಶಕರೊಬ್ಬರು ಎಂಟ್ರಿ ಕೊಡುತ್ತಿದ್ದಾರೆ. ವೆಡ್ಡಿಂಗ್ ಗಿಫ್ಟ್ ಮೂಲಕ ವಿಕ್ರಂ ಪ್ರಭು ಬಣ್ಣದ ಜಗತ್ತಿನೊಂದಿಗೆ ಒಂದಿಷ್ಟು ನೈಜ ಘಟನೆಯನ್ನು ಹೊತ್ತು ತಂದಿದ್ದಾರೆ. ಅದುವೇ ವೆಡ್ಡಿಂಗ್ ಗಿಫ್ಟ್ ಸಿನಿಮಾ. ಜುಲೈ 8ರಂದು ಸಿನಿಮಾ ತೆರೆಗೆ ಬರುತ್ತಿದೆ.

Advertisement

ವಿಕ್ರಂ ಪ್ರಭು ಸಿನಿಮಾದ ಕನಸಿಟ್ಟುಕೊಂಡೆ ಗಾಂಧಿನಗರಕ್ಕೆ ಎಂಟ್ರಿಯಾದವರು. ನಿರ್ದೇಶಕನಾಗಬೇಕೆಂಬ ಬಯಕೆಯಿಂದಾಗಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಗರಡಿಯಲ್ಲಿ ಒಂದಷ್ಟು ಕಾಲ ನಿರ್ದೇಶನದ ಗಂಧಗಾಳಿಯನ್ನು ಸವಿದವರು. ಬಳಿಕ ಲವ್ ಸಿನಿಮಾಗೂ ಕೆಲಸ ಮಾಡಿದವರು. ಆದರೆ ವೈಯಕ್ತಿಕ ಕಾರಣಗಳಿಂದ ಸಂಪೂರ್ಣವಾಗಿ ಅಲ್ಲಿಯೇ ಉಳಿಯಲು ಆಗಲಿಲ್ಲ. ಪುಣೆಗೆ ಹೋದರು. ಅಲ್ಲಿ ಬದುಕಿನ ಬಂಡಿ ಸಾಗುತ್ತಿರುವಾಗಲೂ ಮನಸ್ಸು ಮತ್ತೆ ಗಾಂಧಿ ನಗರದಲ್ಲಿಯೇ ತೇಲುತ್ತಿತ್ತು. ಆ ಕನಸು ನನಸಾಗಿದೆ. ವೆಡ್ಡಿಂಗ್ ಗಿಫ್ಟ್ ಮೂಲಕ ಹಲವು ವರ್ಷಗಳ ತಪಸ್ಸು, ಒಂದಷ್ಟು ಅನುಭವ, ಮನದೊಳಗೆ ಹುಟ್ಟಿದ್ದ ನಿರ್ದೇಶಕ ಹೊರ ಜಗತ್ತಿಗೆ ಬರಲು ರೆಡಿಯಾಗಿದ್ದಾನೆ.

ಇನ್ನು ವಿಕ್ರಂ ಪ್ರಭು ಸುಮ್ಮ ಸುಮ್ಮನೆ ನಿರ್ದೇಶಕನ ಕ್ಯಾಪ್ ತೊಟ್ಟವರಲ್ಲ. ತಮ್ಮ ಕನಸನ್ನು ಸಾಕಾರಗೊಳಿಸಲು ಒಂದಷ್ಟು ಹೋಂ ವರ್ಕ್ ಕೂಡ ಮಾಡಿದ್ದಾರೆ. ಕಮರ್ಷಿಯಲ್ ಎಳೆಯ ಜೊತೆಗೆ ಸಿನಿಮಾದಿಂದ ಒಂದಷ್ಟು ಸಮಾಜ ಸೇವೆಯಾದರೆ ಅದು ಕೊಡುವ ತೃಪ್ತಿಯೇ ಬೇರೆ. ಅದು ವೆಡ್ಡಿಂಗ್ ಗಿಫ್ಟ್ ಮೂಲಕ ಅನಾವರಣವಾಗಿದೆ. ಈಗಾಗಲೇ ಟ್ರೇಲರ್ ನೋಡಿದವರಿಗೆ ಒಂದಷ್ಟು ಭರವಸೆ ಮೂಡಿದೆ. ದೌರ್ಜನ್ಯಕ್ಕೊಳಗಾದ ಒಂದಷ್ಟು ಜೀವಗಳಿಗೆ ಏನೋ ಸಮಾಧಾನ ಸಿಗುವ ಭರವಸೆ ಮೂಡಿಸಿದೆ. ಟ್ರೇಲರ್ ನಲ್ಲಿಯೇ ಇಷ್ಟು ಮನಸ್ಸುಗಳನ್ನು ಗೆದ್ದಿರುವ ಕಥೆ ಇದಾಗಿದ್ದು, ಇನ್ನು ಸಿನಿಮಾ ಕೂಡಾ ಹೆಚ್ಚಿನ ಕುತೂಹಲದ ನಿರೀಕ್ಷೆ ಹುಟ್ಟಿಸಿದೆ.

Advertisement

ವೆಡ್ಡಿಂಗ್ ಗಿಫ್ಟ್ ಸಿನಿಮಾ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುವುದಂತು ಪಕ್ಕಾ ಎನಿಸಿದೆ. ವಿಕ್ರಂ ಪ್ರಭು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು, ಅವರದ್ದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸೋನುಗೌಡ, ನಿಶಾನ್, ಪ್ರೇಮಾ, ಅಚ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next