Advertisement

‘ವಿಕ್ರಮ್‌’ಸಿನಿಮಾ ಗೆದ್ದ ಖುಷಿಗೆ ನಿರ್ದೇಶಕರಿಗೆ ಕಾರು ಗಿಫ್ಟ್ ಕೊಟ್ಟ ಕಮಲ ಹಾಸನ್‌

09:28 PM Jun 07, 2022 | Team Udayavani |

ಚೆನ್ನೈ: ಕಮಲ್‌ ಹಾಸನ್‌ ನಟನೆಯ “ವಿಕ್ರಮ್‌’ ಸಿನಿಮಾ ಸೂಪರ್‌ ಹಿಟ್‌ ಆಗಿದೆ.ಸಿನಿಮಾ ಬಿಡುಗಡೆಯಾಗಿ ನಾಲ್ಕೇ ದಿನಗಳಲ್ಲಿ 175 ಕೋಟಿ ರೂ. ಬಾಚಿಕೊಂಡಿದೆ.

Advertisement

ಈ ಖುಷಿಯನ್ನು ಸಂಭ್ರಮಿಸಿರುವ ಕಮಲ್‌ ಹಾಸನ್‌, ಸಿನಿಮಾದ ನಿರ್ದೇಶಕ ಲೋಕೇಶ್‌ ಕಂಗರಾಜ್‌ಗೆ ಲೆಕ್ಸಸ್‌ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಕಮಲ್‌ ಅವರು ಲೋಕೇಶ್‌ ಕೈಗೆ ಕಾರಿನ ಕೀ ಹಸ್ತಾಂತರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಮೇ 3ರಂದು ಬಿಡುಗಡೆಯಾದ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಕಮಲ್‌ ಜತೆ ವಿಜಯ್‌ ಸೇತುಪತಿ ಹಾಗೂ ಫ‌ಹದ್‌ ಫಾಸಿಲ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next