Advertisement

“ಮಕ್ಕಳನ್ನು ಸುಸಂಸ್ಕೃರನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ’

03:27 PM Sep 14, 2021 | Team Udayavani |

ವಿಕ್ರೋಲಿ: ವಿಕ್ರೋಲಿ ಕನ್ನಡ ಸಂಘ ಸಂಚಾಲಿತ ವಿಕ್ರೋಲಿ ಪೂರ್ವ ಠಾಗೋರ್‌ ನಗರದಲ್ಲಿರುವ ವೀಕೇಸ್‌ ಇಂಗ್ಲಿಷ್‌ ಹೈಸ್ಕೂಲ್‌ನಲ್ಲಿ ಶಿಕ್ಷಕರ ದಿನಾಚರಣೆ ಸೆ. 6ರಂದು ಶಾಲಾ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು. ಇದೇ ಸಂದರ್ಭ ನಿವೃತ್ತ ಶಿಕ್ಷಕರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

Advertisement

ಸಂಘದ ಅಧ್ಯಕ್ಷ ಸತೀಶ್‌ ಆರ್‌. ಐಲ್‌ ಮಾತನಾಡಿ, ವಿದ್ಯಾರ್ಥಿಗಳನ್ನು ತಿದ್ದಿ-ತೀಡಿ ವಿದ್ಯಾವಂತರನ್ನಾಗಿ ಮಾಡಿ ಶ್ರೇಷ್ಟ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಿದ್ಯಾರ್ಥಿಗಳ ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನ ಸಫಲವಾಗುತ್ತದೆ. ಸೇವೆಯಿಂದ ನಿವೃತ್ತರಾದ ಮಾಧ್ಯಮಿಕ ವಿಭಾಗದ ಶಿಕ್ಷಕಿ ನೇತ್ರಾಮಿಸ್ತ್ರೀ, ಪ್ರಾಥಮಿಕ ವಿಭಾಗದ ಸುಭದ್ರಾದೇವಿ, ಶಾಲಾ ಸಿಬಂದಿ ಮಂಗಳಾ ಮಾನೆ ಇವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

ಪ್ರಾಥಮಿಕ ವಿಭಾಗದ ಶಿಕ್ಷಕಿಯರು ಪ್ರಾರ್ಥನೆಗೈದರು. ಮಾಧ್ಯಮಿಕ ವಿಭಾಗದ ಶಿಕ್ಷಕಿಯರು ಸ್ವಾಗತ ಗೀತೆ ಹಾಡಿದರು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷರು, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಶಾಲೆಯ ಪರಿವೀಕ್ಷಕ ದೀಪಕ್‌ ಗಬಾಲೆ ನಿವೃತ್ತ ಶಿಕ್ಷಕಿಯರನ್ನು ಪರಿಚಯಿಸಿ ಅವರ ಸಾಧನೆ ವಿವರಿಸಿ ಶುಭ ಹಾರೈಸಿದರು.

ಇದನ್ನೂ ಓದಿ:ಮೂರು ಘಟನೆ ಸೇರಿ ಒಂದು ಸಿನಿಮಾ: ಸೆಟ್ಟೇರಿತು ‘ತ್ರಿವೇದಂ’

ನಿವೃತ್ತ ಶಿಕ್ಷಕಿಯರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ, ಗೌರವ ನಿಧಿಯೊಂದಿಗೆ ಅಭಿನಂದಿಸಿ ಗೌರವಿಸಲಾಯಿತು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ರೂಪಾಲಿ ಬೊನಡ್ವಾರ್‌, ದೈಹಿಕ ಶಿಕ್ಷಣ ಶಿಕ್ಷಕ ಮಹಾದೇವ ಸೋಲಾಸರ್‌ ಅವರು ನಿವೃತ್ತ ಶಿಕ್ಷಕರೊಂದಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡು ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಜತೆ ಕಾರ್ಯದರ್ಶಿ ಹರೀಶ್‌ ಉಚ್ಚಿಲ್‌ ಶಿಕ್ಷಕ ದಿನಾಚರಣೆ ಬಗ್ಗೆ ಮಾತನಾಡಿ, ನಿವೃತ್ತ ಶಿಕ್ಷಕಿಯರಿಗೆ ಶುಭ ಹಾರೈಸಿದರು. ಕಾರ್ಯದರ್ಶಿ ಉದಯ ಎಲ್‌. ಶೆಟ್ಟಿ ಪೇಜಾವರ ಅವರು ಕೊರೊನಾ ಸಂದರ್ಭ ಶಿಕ್ಷಕವೃಂದದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕವೃಂದ, ಶಿಕ್ಷಕೇತರ ಸಿಬಂದಿ ಪಾಲ್ಗೊಂಡಿದ್ದರು. ಸಂಘದ ಪದಾಧಿಕಾರಿಗಳಾದ ಉಮೇಶ್‌ ಕೋಟ್ಯಾನ್‌, ಪ್ರವೀಣ್‌ ಶೆಟ್ಟಿ, ಸದಸ್ಯರಾದ ಯುಗಾನಂದ ಶೆಟ್ಟಿ, ರಾಘವ ಕುಂದರ್‌, ಗಣೇಶ್‌ ಶೆಟ್ಟಿ, ನವೀನ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next