Advertisement

Vikasa Parva Movie Review: ಜೀವನ ಪಾಠದ ‘ವಿಕಾಸ ಯಾತ್ರೆ’

12:38 PM Sep 14, 2024 | Team Udayavani |

ಅವರು ಸಮಾನ ಮನಸ್ಕ ನಾಲ್ವರು ಫ್ರೆಂಡ್ಸ್‌. ಜೊತೆಗೆ ಪಾರ್ಟಿ ಪ್ರಿಯರು. ಆದರೆ, ಇವರ ಪಾರ್ಟಿ ಫ್ಯಾಮಿಲಿಗೆ ಕಿರಿಕಿರಿ. ಈ ನಡುವೆಯೇ ಅವರ ನಡುವೆಯೇ ಒಂದು ದುರ್ಘ‌ಟನೆ ನಡೆದುಬಿಡುತ್ತದೆ. ಅಲ್ಲಿಂದ ಯೋಚನೆ, ಮನಸ್ಥಿತಿ ಬದಲಾಗುತ್ತದೆ. ಅಷ್ಟಕ್ಕೂ ಏನು ಎಂಬ ಪ್ರಶ್ನೆಗೆ ಉತ್ತರ “ವಿಕಾಸ ಪರ್ವ’.

Advertisement

ಕೆಲವು ಸಿನಿಮಾಗಳು ಒಂದೊಳ್ಳೆಯ ಉದ್ದೇಶದೊಂದಿಗೆ ತಯಾರಾಗುತ್ತವೆ. “ವಿಕಾಸ ಪರ್ವ’ ಕೂಡಾ ಇಂತಹದ್ದೇ ಒಂದು ಸದುದ್ದೇಶದಿಂದ ಮಾಡಿರುವ ಸಿನಿಮಾ. ಇದು ಕಮರ್ಷಿಯಲ್‌ ಸಿನಿಮಾ ನಿಜ. ಆದರೆ, ರೆಗ್ಯುಲರ್‌ ಶೈಲಿಯನ್ನು ಬಿಟ್ಟು, ನಾಯಕ, ನಾಯಕಿ, ಹಾಡು, ಫೈಟ್‌.. ಇವೆಲ್ಲದರಿಂದ ಮುಕ್ತವಾಗಿ ಕಂಟೆಂಟ್‌ಗೆ ಹೆಚ್ಚು ಒತ್ತುಕೊಟ್ಟಿರುವ ಸಿನಿಮಾ. ಕುಡಿತ ಹೇಗೆ ಮನೆ, ಮನಸ್ಸುಗಳನ್ನು ಹಾಳು ಮಾಡುತ್ತದೆ ಎಂಬುದು ಈ ಸಿನಿಮಾ ಮುಖ್ಯ ಕಥಾಹಂದರ.

ಇದನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಸಂದೇಶವೂ ಇದೆ. ಒಂದು ಪ್ರಯತ್ನವಾಗಿ “ವಿಕಾಸ ಪರ್ವ’ವನ್ನು ಮೆಚ್ಚಬಹುದು. ಮೂಲ ಅಂಶವನ್ನು ಬಿಟ್ಟುಕೊಡದೇ ನಿರೂಪಣೆ ಮಾಡುವ ಮೂಲಕ ಸಿನಿಮಾ ಗೊಂದಲಮುಕ್ತವಾಗಿದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರೋಹಿತ್‌ ನಾಗೇಶ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಸ್ವಾತಿ, ಅಶ್ವಿ‌ನ್‌ ಹಾಸನ್‌, ಕುರಿರಂಗ ನಟಿಸಿದ್ದಾರೆ.

ಆರ್‌.ಪಿ. ರೈ

Advertisement

Udayavani is now on Telegram. Click here to join our channel and stay updated with the latest news.

Next