ನವದೆಹಲಿ: ಹರ್ಯಾಣ ಕಾಂಗ್ರೆಸ್ ಮುಖಂಡ ವಿಕಾಸ್ ಚೌಧರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಕ್ರಿಮಿನಲ್ ವಿಕಾಸ್ ಅಲಿಯಾಸ್ ಮಲ್ಹೇ ಎಂಬಾತನನ್ನು ದೆಹಲಿಯ ವಿಶೇಷ ಪೊಲೀಸ್ ಪಡೆ ಸೋಮವಾರ (ಏಪ್ರಿಲ್ 25) ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬಳೆ ವ್ಯಾಪಾರಕ್ಕೆ ಹೊರಟವರ ಬದುಕು ಅಂತ್ಯ: ಅಪರಿಚಿತ ವಾಹನ ಢಿಕ್ಕಿಯಾಗಿ ಇಬ್ಬರು ಸಾವು
ಆರು ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಗ್ಯಾಂಗ್ ಸ್ಟರ್ ವಿಕಾಸ್ ಎಂಬಾತನನ್ನು ಸೆರೆಹಿಡಿಯಲಾಗಿದೆ. ಪಂಜಾಬ್ ನಲ್ಲಿ ಇತ್ತೀಚೆಗೆ ನಡೆದ ಕಬಡ್ಡಿ ಆಟಗಾರ ಸಂದೀಪ್ ನಂಗಾಲ್ ಎಂಬಾತನ ಹತ್ಯೆಯ ಹಿಂದೆ ವಿಕಾಸ್ ಕೈವಾಡ ಇದ್ದಿರುವುದಾಗಿ ದೆಹಲಿ ಪೊಲೀಸರು ವಿವರ ನೀಡಿದ್ದಾರೆ.
ಹರ್ಯಾಣ, ಪಂಜಾಬ್ ಮತ್ತು ಉತ್ತರಪ್ರದೇಶದಲ್ಲಿ ವಾಂಟೆಡ್ ಪಟ್ಟಿಯಲ್ಲಿದ್ದ ಗ್ಯಾಂಗ್ ಸ್ಟರ್ ವಿಕಾಸ್ ತಲೆಗೆ ಪೊಲೀಸರು 50 ಸಾವಿರ ರೂಪಾಯಿ ನಗದು ಘೋಷಿಸಿದ್ದರು. 2019ರಲ್ಲಿ ಕಾಂಗ್ರೆಸ್ ಮುಖಂಡ ವಿಕಾಸ್ ಚೌಧರಿಯನ್ನು ಫರಿದಾಬಾದ್ ನಲ್ಲಿ ಹತ್ಯೆಗೈಯಲಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ವಿಕಾಸ್ ಪಂಜಾಬ್ ನಲ್ಲಿ ಕ್ರಿಮಿನಲ್ ಗ್ಯಾಂಗ್ ಸ್ಟರ್ ಗಳ ಜೊತೆ ಸೇರಿ ಕೊಲೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಎಂದು ತಿಳಿಸಿದ್ದಾರೆ.