Advertisement

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

08:40 PM Apr 16, 2024 | Team Udayavani |

ವಿಜಯಪುರ : ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ವಿಜಯಪುರ ಮೂಲದ ಹುಬ್ಬಳ್ಳಿ ನಿವಾಸಿ ಕುಟುಂಬದ ಕುವರಿಯೊಬ್ಬಳು 100ನೇ ಸ್ಥಾನ ಪಡೆದಿದ್ದಾಳೆ.

Advertisement

ವಿಜಯಪುರ ಜಿಲ್ಲೆಯ ಮೂಲದವರಾದ ವಿಜೇತಾ ಭೀಮಸೇನ ಹೊಸಮನಿ ಎಂಬ ಯುವತಿಯೇ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಹಾಲಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.

ಎಲ್‍ಕೆಜಿ-5ನೇ ತರಗತಿ ವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಓದಿರುವ ವಿಜೇತಾ, ಬಳಿಕ ಎಸ್‍ಎಸ್‍ಎಲ್‍ಸಿ ವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಳು.

ಪಿಯುಸಿ ಓದಿಗೆ ಮರಳಿ ವಿಜಯಪುರಕ್ಕೆ ಬಂದ ವಿಜೇತಾ, ಪ್ರಥಮ ವರ್ಷವನ್ನು ನಗರದ ತುಂಗಳ ಪದವಿ ಪೂರ್ವ ಕಾಲೇಜಿನಲ್ಲಿ, ದ್ವಿತಿಯ ವರ್ಷದ ಅಧ್ಯಯನವನ್ನು ದರ್ಬಾರ ಕಾಲೇಜಿನಲ್ಲಿ ಮುಗಿಸಿದ್ದಳು.

ಪ್ಲ್ಯಾಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗುಜರಾತ ರಾಜ್ಯದ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಕಾನೂನು ಪದವಿಗಾಗಿ ಎಲ್‍ಎಲ್‍ಬಿ ಮುಗಿಸಿದ್ದು, ಕ್ರಿಮಿನಲ್ ಲಾ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಕಾನೂನು ಪದವಿ ಪಡೆದಿದ್ದಾಳೆ.

Advertisement

2020 ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಲು ಆರಂಭಿಸಿದ್ದ ವಿಜೇತಾ, 2023 ರ ಪಿಲ್ಮನರಿ ಪರೀಕ್ಷೆ, ಮೇನ್ ಎಕ್ಸಾಂ ಪಾಸ್ ಆಗಿ ಇಂಟರವ್ಯೂವ್ ಪಾಸ್ ಮಾಡಿ ಉತ್ತೀರ್ಣಳಾಗಿದ್ದಾಳೆ.

ಮನೆಯಲ್ಲೇ ಇದ್ದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ವಿಜೇತಾ ಹೊಸಮನಿ, ಆನ್‍ಲೈನ್ ತರಬೇತಿ ಪಡೆದಿದ್ದಳು. ಇದೀಗ 100ನೇ ಸ್ಥಾನದಲ್ಲಿ ರ್ಯಾಂಕಿಂಗ್ ಸಿಕ್ಕಿದ್ದು, ಭಾರತೀಯ ಕಂದಾಯ ಸೇವೆಯಲ್ಲಿ ಸೇವಾ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾಳೆ.

ಬ್ಯಾಂಕ್ ಉದ್ಯೋಗದಲ್ಲಿದ್ದ ವಿಜೇತಾ ತಂದೆ ಭೀಮಶೇನ ಹೊಸಮನಿ ಸ್ವಯಂ ನಿವೃತ್ತಿ ಪಡೆದಿದ್ದು, ಮಗಳ ಸಾಧನೆಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಮಕ್ಕಳು ಸಾಧನೆ ಮಾಡಿದ್ದನ್ನು ಕಣ್ತುಂಬಿಕೊಳ್ಳುವುದಕ್ಕಿಮತ ಭಾಗ್ಯ ಇನ್ನೇನಿದೆ ಎನ್ನುವ ಮೂಲಕ ಮಗಳ ಸಾಧನೆಗೆ ಹೆಮ್ಮೆಯ ಮಾತನಾಡಿದ್ದಾರೆ.

ಇದನ್ನೂ ಓದಿ: Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next