ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾ ಅಂದುಕೊಂಡ ಹಾಗೆ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ ಗಳಕೆಯಲ್ಲಿ ಸಿನಿಮಾ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.
ವರ್ಲ್ಡ್ ವೈಡ್ ʼಲಿಯೋದಾಸ್ʼ ಅಬ್ಬರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ದಿನ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ʼಲಿಯೋʼ 68 ಕೋಟಿ ರೂ.ಗಳಿಕೆ ಕಂಡಿತ್ತು. ವರ್ಲ್ಡ್ ವೈಡ್ 148.5 ಕೋಟಿ ರೂ. ಗಳಕೆ ಕಂಡಿತ್ತು. ಇದು ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ.
‘ಲಿಯೋ’ ಕಲೆಕ್ಷನ್ ಬಗ್ಗೆ ʼಇಂಡಿಯಾ ಟುಡೇʼ ಜೊತೆ ಮಾತನಾಡಿದ ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲ ರಮೇಶ್ ಬಾಲ, “ದಸರಾ ರಜಾ ಸಮಯದ ವೇಳೆ ʼಲಿಯೋʼ ಸಿನಿಮಾಕ್ಕೆ ಪ್ರಯೋಜನವಾಗಲಿದೆ. ತಮಿಳು ಸಿನಿಮಾರಂಗದಲ್ಲಿ ʼಲಿಯೋʼ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ‘ಜೈಲರ್’ ಮತ್ತು ‘ಪೊನ್ನಿಯಿನ್ ಸೆಲ್ವನ್’ ಚಿತ್ರಗಳಿಗಿಂತ ‘ಲಿಯೋ’ ಉತ್ತಮ ಪ್ರದರ್ಶನ ನೀಡಿದೆ. ಗ್ಲೋಬಲ್ ಮಾರ್ಕೆಟ್ ನಿಂದಾಗಿ ದೊಡ್ಡ ಓಪನಿಂಗ್ ಪಡೆಯಲು ಕಾರಣವಾಗಿದೆ. ತಮಿಳುನಾಡಿನಲ್ಲಿ ʼಲಿಯೋʼ ದಾಖಲೆ ಬರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಅಲ್ಲಿ ಮುಂಜಾನೆ 4 ಹಾಗೂ 7 ಗಂಟೆಯ ಶೋಗಳಿರಲಿಲ್ಲ. ಆದರೆ, ಕರ್ನಾಟಕ ಮತ್ತು ಕೇರಳದಂತಹ ಇತರ ಸ್ಥಳಗಳಲ್ಲಿ ಮಾರ್ನಿಂಗ್ ಶೋಗಳಿತ್ತು, ಪ್ರಿಮಿಯರ್ ಶೋಗಳಿತ್ತು. ಇದು ಚಿತ್ರಕ್ಕೆ ಪ್ಲಸ್ ಆಯಿತು. ವಿದೇಶದ ಮಾರ್ಕೆಟ್ ನಲ್ಲಿ ಮೊದಲೇ ಸಿನಿಮಾದ ಪ್ರಚಾರ ಆರಂಭಿಸಲಾಗಿತ್ತು. ಇದರಿಂದ ವಿದೇಶದಲ್ಲಿ ಟಿಕೆಟ್ ಬುಕ್ ಮಾಡಲು ತುಂಬಾ ಸಮಯ ಸಿಕ್ಕಿತ್ತು” ಎಂದಿದ್ದಾರೆ.
ಮೊದಲ ದಿನ ವರ್ಲ್ಡ್ ವೈಡ್ ಸೇರಿ 130 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೊಂದು ಬಿಗೆಸ್ಟ್ ವರ್ಲ್ಡ್ ವೈಡ್ ಕಲೆಕ್ಷನ್ ಆಗಿದೆ. ಈ ಹಿಂದೆ ರಜಿನಿಕಾಂತ್ ಅವರ ʼ2.0ʼ ಸಿನಿಮಾ ವರ್ಲ್ಡ್ ವೈಡ್ ನಲ್ಲಿ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿತ್ತು. ಈ ದಾಖಲೆಯನ್ನು ಈಗ ʼಲಿಯೋʼ ಮೀರಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ‘ಲಿಯೋ’ ವಿಶ್ವಾದ್ಯಂತ 148.5 ಕೋಟಿ ರೂಪಾಯಿಗಳನ್ನು ಗಳಿಸಿದೆ, ಇದು ಯಾವುದೇ ಭಾರತೀಯ ಚಿತ್ರಕ್ಕೆ ವಿಶ್ವದಾದ್ಯಂತ ಆದ ಅತೀ ಹೆಚ್ಚು ಕಲೆಕ್ಷನ್ ಆಗಿದೆ. ಆ ಮೂಲಕ ʼಜವಾನ್ʼ ಸಿನಿಮಾದ ದಾಖಲೆಯನ್ನೂ ʼಲಿಯೋʼ ಬ್ರೇಕ್ ಮಾಡಿದೆ.
ದಳಪತಿ ವಿಜಯ್ ಹಾಗೂ ಕನಕರಾಜ್ ಅವರಿಗೆ ʼಲಿಯೋʼ ಅತೀ ಹೆಚ್ಚು ಗಳಿಕೆ ತಂದುಕೊಡುತ್ತದೆಯೋ ಎನ್ನುವುದರ ಬಗ್ಗೆ ಕಾದು ನೋಡಬೇಕಿದೆ. ವಿಜಯ್ ಅವರಿಗೆ ʼವಾರಿಸುʼ ಸಿನಿಮಾ ಅತೀ ಹೆಚ್ಚು ಗಳಿಕೆ ತಂದುಕೊಟ್ಟಿದ್ದು, ಲೋಕೇಶ್ ಅವರಿಗೆ ʼವಿಕ್ರಮ್ʼ ಸಿನಿಮಾ ಅತೀ ಹೆಚ್ಚು ಗಳಿಕೆ ತಂದುಕೊಟ್ಟ ಸಿನಿಮಾವಾಗಿದೆ. ʼಲಿಯೋʼ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದರೆ ಇಬ್ಬರಿಗೂ ಸಾರ್ವಕಾಲಿಕ ಗಳಿಕೆ ತಂದುಕೊಟ್ಟ ಸಿನಿಮಾವಾಗುತ್ತದೆ. ಯಾವುದಕ್ಕೂ ಈ ಕೆಲ ದಿನಗಳವರೆಗೆ ಕಾದುನೋಡಬೇಕಿದೆ.