Advertisement

ವಿಜಯಪುರ ಪೊಲೀಸರಿಂದ ಏಳು ಅಂತಾರಾಜ್ಯ ಕಳ್ಳರ ಬಂಧನ

02:31 PM Sep 09, 2021 | keerthan |

ವಿಜಯಪುರ: ಜಿಲ್ಲೆಯ ಪೊಲೀಸರು ಕಳ್ಳತನ ಆರೋಪದಲ್ಲಿ ಏಳು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದು, 16.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತ ಏಳು ಆರೋಪಿಗಳಲ್ಲಿ ವಿಜಯಪುರ ಜಿಲ್ಲೆಯ ಐವರು ಹಾಗೂ ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ಮೂಲದ ಇಬ್ಬರು ಸೇರಿದ್ದಾರೆ.

ಏಳು ಜನರ ಈ ತಂಡ ವಿಜಯಪುರ ಜಿಲ್ಲೆಯಲ್ಲಿ ಏಳು, ಬಾಗಲಕೋಟೆ ಜಿಲ್ಲೆಯ ಎರಡು, ಬೆಳಗಾವಿ ಜಿಲ್ಲೆಯ ಒಂದು ಕಳ್ಳತನ ಸೇರಿ 11 ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದಲ್ಲದೇ ಮಹಾರಾಷ್ಟ್ರ ರಾಜ್ಯದ ಕೆಲವೆಡೆ ಈ ‌ತಂಡ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತೂ ಅಲ್ಲಿನ ಪೊಲೀಸರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಎಸ್ ಪಿ ಆನಂದ ಕುಮಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದನ್ನೂ ಓದಿ:ನಾಲ್ಕುಸಾವಿರ ಪೊಲೀಸರ ನೇಮಕಾತಿ: ಆರಗ ಜ್ಞಾನೇಂದ್ರ

ಬಂಧಿತರಿಂದ 16.10 ಲಕ್ಷ ರೂ. ಮೌಲ್ಯದ 356 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಆಭರಣ, ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ವಿವರ ನೀಡಿದರು.

Advertisement

ಸದರಿ ಪ್ರಕರಣಗಳನ್ನು ಬೇಧಿಸಿ, ಆರೋಪಗಳನ್ನು ಬಂಧಿಸಿ, ಕಳ್ಳತನ ಆಗಿದ್ದ ವಸ್ತುಗಳನ್ನು ವಶಕ್ಕೆ ಪಡೆದ ಡಿಎಸ್ಪಿ ಲಕ್ಷ್ಮೀನಾರಾಯಣ, ಗಾಂಧಿ ಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ, ಗೋಲಗುಂಬಜ ವೃತ್ತದ ಸಿಪಿಐ ರಮೇಶ ಅವಜಿ, ಎಸೈಗಳಾದ ಎಸ್.ಎಂ.ಶಿರಗುಪ್ಪಿ, ಸೋಮೇಶ ಗೆಜ್ಜಿ ಅವರಿದ್ದ ತನಿಖಾ ತಂಡಕ್ಕೆ ನಗದು ಬಹುಮಾನ ಘೋಷಿಸಿ, ವಿತರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next