ವಿಜಯಪುರ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವಿವಿಧ ವಾಹನಗಳ ಶೋರೂಂಗಳಲ್ಲಿ ಸರಣಿ ಕಳ್ಳತನ ನಡೆದಿದೆ.
ನಗರದ ವಿಜಯಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲಿರುವ ಹುಂಡೈ, ಕಿಯಾ, ಟೊಯೋಟಾ, ಆರ್.ಎನ್.ಎಸ್ ಮೋಟಾರು ವಾಹನಗಳ ಶೋರೂಂಗಳಿಗೆ ಸೋಮವಾರ ರಾತ್ರಿ ನುಗ್ಗಿರುವ ಕಳ್ಳರು, ಸರಣಿ ಕಳ್ಳತನ ಮಾಡಿ ಕೈಚಳಕ ತೋರಿದ್ದಾರೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಸರಣಿ ಕಳ್ಳರು, ಶೋರೂಂ ಪ್ರವೇಶದ ಬಳಿಕ ಕಳ್ಳರು ಸಿಸಿ ಕೆಮೆರಾಗಳು ತಮ್ಮ ಕಳ್ಳತನದ ಕೈಚಳಕ ಸೆರೆ ಹಿಡಿಯದಂತೆ ಕೆಮೆರಾಗಳನ್ನು ವಿರುದ್ದ ದಿಕ್ಕಿಗೆ ತಿರುಗಿಸಿ, ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ:Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್
Related Articles
ಕಳ್ಳರು ವಿವಿಧ ಶೋರೂಂಗಳಲ್ಲಿ ಕದ್ದ ಹಣ ಎಷ್ಟು, ಹಣದ ಹೊರತಾಗಿ ಮತ್ತೆ ಇನ್ನು ಏನೇನು ಕಳ್ಳತನ ಮಾಡಿದ್ದಾರೆ ಎಂದು ಪ್ರಾಥಮಿಕ ಹಂತದಲ್ಲಿ ನಿಖರವಾಗಿ ತಿಳಿದು ಬಂದಿಲ್ಲ.
ಸ್ಥಳಕ್ಕೆ ಧಾವಿಸಿರುವ ಜಲನಗರ ಠಾಣೆ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.