Advertisement

Vijayapura: ಕೊಲ್ಹಾರ ಪಟ್ಟಣದ ಮಹಿಳೆ ಮೂವರು ಮಕ್ಕಳೊಂದಿಗೆ ನಾಪತ್ತೆ

08:05 PM Sep 14, 2023 | Team Udayavani |

ವಿಜಯಪುರ : ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಕಾಣೆಯಾಗಿದ್ದು, ತಾಯಿ ಹಾಗೂ ಮೂವರು ಮಕ್ಕಳು ನಾಪತ್ತೆಯಾಗಿರುವ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕೊಲ್ಹಾರ ಪಟ್ಟಣದ ನಿವಾಸಿಯಾದ 29 ವರ್ಷದ ಚಂದ್ರಭಾಗಾ ವಿಟ್ಠಲ ಹುಗ್ಗೆನ್ನವರ, ಇವರ ಮಕ್ಕಳಾದ ಪ್ರಥಮ(9), ಸಜನಿ(8),ಸಾನವಿ(6) ಕಾಣೆಯಾಗಿರುವರು ಎಂದು ಚಂದ್ರಭಾಗಾ ಅವರ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಕಾಣೆಯಾಗಿರುವ ಈ ನಾಲ್ವರ ಕುರಿತು ಮಾಹಿತಿ ಸಿಕ್ಕಲ್ಲಿ, ಪತ್ತೆಯಾದಲ್ಲಿ ಸಾರ್ವಜನಿಕರು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ದೂ.08352-250152, ವಿಜಯಪುರ ಕಂಟ್ರೋಲ್ ರೂಂ. ದೂ:08352-250844, 250751, ಬಸವನಬಾಗೇವಾಡಿ ಡಿಎಸ್‍ಪಿ ಮೊ.9480804221, ನಿಡಗುಂದಿ ಸಿಪಿಐ ಮೊ.9480804236, ಕೊಲ್ಹಾರ ಠಾಣೆ ದೂ: 08426-283013, ಮೊ.9480804267 ಸಂಖ್ಯೆಗೆ ಮಾಹಿತಿ ಒದಗಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next