Advertisement

Vijayapura; ಬೈಕ್ ನಿಂದ ಬಿದ್ದು ಮಹಿಳೆ ಸಾವು

08:49 PM Aug 08, 2023 | Shreeram Nayak |

ವಿಜಯಪುರ: ತಿಕೋಟಾ ತಾಲೂಕಿನ ಬಾಬಾನಗರ ಕಳ್ಳಕವಟಗಿ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಜರುಗಿದೆ.

Advertisement

ಕಳ್ಳಕವಟಗಿ ಗ್ರಾಮದ ವಿಜಯಲಕ್ಷ್ಮಿ ಚಂದ್ರಕಾಂತ ಶಿರದವಾಡ (35) ಮೃತ ದುರ್ದೈವಿ.

ತಿಕೋಟಾ ಬಾಬಾನಗರ ಮಾರ್ಗವಾಗಿ ಪತಿ ಚಂದ್ರಕಾಂತ ಜೊತೆ ಕಳ್ಳಕವಟಗಿ ಗ್ರಾಮಕ್ಕೆ ಹೊರಟಿದ್ದರು.

ಬೈಕ್ ನ ಹಿಂಬದಿ ಕುಳಿತಿದ್ದ ವಿಜಯಲಕ್ಷ್ಮಿ ಕೆಳಗೆ ಬಿದ್ದಾಗ ತಲೆಯ ಹಿಂಭಾಗಕ್ಕೆ ಭಾರಿ ಗಂಭೀರ ಗಾಯವಾಗಿತ್ತು.

ಕೂಡಲೇ 108 ಅಂಬ್ಯುಲೆನ್ಸ್ ನಲ್ಲಿ ವಿಜಯಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ವಿಜಯಲಕ್ಷ್ಮಿ ಕೊನೆಯುಸಿರು ಎಳೆದಿದ್ದಾಳೆ.

Advertisement

ತಿಕೋಟಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next