ವಿಜಯಪುರ: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಜರುಗಿದೆ.
Advertisement
ನಗರದ ಗಣೇಶ ನಗರದ ಬಳಿ ಇಬ್ರಾಹಿಮಪುರ ರೇಲ್ವೇ ಹಳಿಯ ಮೇಲೆ ಘಟನೆ ಜರುಗಿದೆ. ಗಡಗಿ ಲೇಔಟ್ ನಿವಾಸಿ ಗುರುರಾಜ ಪುರೋಹಿತ್ (45) ಆತ್ಮಹತ್ಯೆಗೆ ಶರಣಾದವ ಎಂದು ಗುರುತಿಸಲಾಗಿದೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಸುಮಾರಿಗೆ ಮುಂಬೈ-ಗದಗ ಮಾರ್ಗ ಮಧ್ಯೆ ಸಂಚರಿಸುವ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.