ವಿಜಯಪುರ : ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಸಂಭವಿಸಿದ್ದ ತೆಪ್ಪ ದುರಂತದಲ್ಲಿ ನಾಪತ್ತೆಯಾಗಿದ್ದ ಐವರಲ್ಲಿ ಗುರುವಾರ ಪತ್ತೆಯಾದ ರಫೀಕ್ ಶವದೊಂದಿದೆ ಎಲ್ಲರ ಶವಗಳೂ ಪತ್ತೆಯಾಗಿವೆ. ಇದರೊಂದಿಗೆ ತೆಪ್ಪ ದುರಂತದ ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ.
ಜುಲೈ 2 ರಂದು ಸಂಜೆ ತೆಪ್ಪ ಮುಳುಗಿ ಐವರು ನಾಪತ್ತೆ ಆಗಿದ್ದು, ಈ ವರೆಗೆ ಮೂವರ ಶವ ಪತ್ತೆಯಾಗಿದ್ದವು. ಗುರುವಾರ ಇನ್ನಿಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
ನಾಪತ್ತೆ ಆದವರಿಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದಾಗ ಮಹಿಬೂಬ್ ವಾಲಿಕಾರ ಶವ ನದಿ ತೀರದಲ್ಲಿ ತೇಲಿಬಂದಿದ್ದರೆ, ಇದೀಗ ರಫೀಕ್ ಬಾಂಬೆ ಶವವೂ ಪತ್ತೆ ಆಗಿದೆ.
ಇದರೊಂದಿಗೆ ಬಳೂತಿ ಕೃಷ್ಣಾ ನದಿ ತೆಪ್ಪ ದುರಂತದಲ್ಲಿ ನಾಪತ್ತೆ ಆಗಿದ್ದ ಐವರಲ್ಲಿ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ.
ಶವವಾಗಿ ಪತ್ತೆಯಾದವರನ್ನು ಪುಂಡಲೀಕ ಯಂಕಂಚಿ, ತಯ್ಯಬ ಚೌಧರಿ, ದಶರಥ ಗೌಡರ, ಮಹಿಬೂಬ್ ವಾಲಿಕಾರ ಹಾಗೂ ರಫೀಕ್ ಬಾಂಬೆ ಎಂದು ಗುರುತಿಸಲಾಗಿದೆ.
ಬಳೂತಿ ಬಳಿ ಕೃಷ್ಣಾ ನದಿಯಲ್ಲಿ ಮಂಗಳವಾರ ಸಂಭವಿಸಿರುವ ತೆಪ್ಪ ದುರಂತದಲ್ಲಿ ನಾಪತ್ತೆ ಆದವರಿಗಾಗಿ ಅಗ್ನಿಶಾಮಕ ಸೇವೆ ಠಾಣೆಗಳ 30 ಸಿಬ್ಬಂದಿ ಯಾಂತ್ರೀಕೃತ 5 ಬೋಟ್ ಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದವು.
ಇದನ್ನೂ ಓದಿ: T20 World Cup ಗೆದ್ದು ತಾಯ್ನಾಡಿಗೆ ಮರಳಿದ ಟೀಮ್ ಇಂಡಿಯಾ… ಅದ್ಧೂರಿ ಸ್ವಾಗತ