Advertisement

ವಿಜಯಪುರ : ಶಿಕ್ಷಕರ ಅಕ್ರಮ ನೇಮಕಾತಿ : ಸಿಒಡಿ ಬಲೆಗೆ ಬಿದ್ದ ಶಿಕ್ಷಕ ಅಶೋಕ

08:23 AM Sep 21, 2022 | Team Udayavani |

ವಿಜಯಪುರ : ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ ತನಿಖೆಗೆ ಇಳಿದಿರುವ ಸಿಒಡಿ ಪೊಲೀಸರು ಅಕ್ರಮ ನೇಮಕಾತಿಯಲ್ಲಿ ಕೈಚಳಕ ತೋರಿದ ವಿಜಯಪುರ ಜಿಲ್ಲೆಯ ಶಿಕ್ಷಕರನ್ನು ಒಬ್ಬೊಬ್ಬರಾಗಿ ಬಲೆಗೆ ಕೆಡವುತ್ತಿದ್ದಾರೆ. ಇದೀಗ ಅಶೋಕ ಚವ್ಹಾಣ ಎಂಬ ಶಿಕ್ಷಕನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

Advertisement

ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ನಂಟು ಗಾಢವಾಗಿರುವುದು ಅಕ್ರಮ ನೇಮಕಾತಿ ಆರೋಪದಲ್ಲಿ ಶಿಕ್ಷಕರ ಸರಣಿ ಬಂಧನ‌ ಇಂಬು ನೀಡುತ್ತಿದೆ.

ಅಕ್ರಮವಾಗಿ ನೇಮಕ ಆಗಿರುವ ಶಿಕ್ಷಕ ಅಶೋಕ ಚವ್ಹಾಣ ಮೂಲಕ ಸಿಓಡಿ ಅಧಿಕಾರಿಗಳಿಂದ ಬಂಧನವಾದ ಮೂರನೇ ಶಿಕ್ಷಕ ಎನಿಸಿದ್ದಾನೆ.

ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಅಶೋಕ ಚವ್ಹಾಣ ಅಕ್ರಮ ನೇಮಕ ಆಗಿರುವ ಸೂಕ್ತ ದಾಖಲೆ, ಮಾಹಿತಿ ಸಂಗ್ರಹಿಸಿರುವ ಸಿಓಡಿ ತನಿಖಾ ತಂಡ, ಅಕ್ರಮ ನೇಮಕಾತಿ ಹೊಂದಿದ್ದನ್ನು ಖಚಿತಪಡಿಸಿಕೊಂಡಿದೆ.

ವಿಜಯಪುರ ಜಿಲ್ಲೆಗೆ ವರ್ಗವಾಗಿ ಬರುವ ಮುನ್ನ ಶಿಕ್ಷಕ ಅಶೋಕ ಚವ್ಹಾಣ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಮೊದಲು ಸೇವೆ ಸಲ್ಲಿಸಿದ್ದ.

Advertisement

ಶಿಕ್ಷಕರ ಅಕ್ರಮ‌ ನೇಮಕ ಹಗರಣದಲ್ಲಿ ತನಿಖೆ ನಡೆಸುತ್ತಿರುವ ಸಿಓಡಿ ತನಿಖಾ ತಂಡ ಈಗಾಗಲೇ ಜಿಲ್ಲೆಯ ಇಬ್ಬರು ಶಿಕ್ಷಕರ ಬಂಧಿಸಿದೆ. ಚಡಚಣ ತಾಲುಕಿನ ಹತ್ತಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ ಸೂಸಲಾದಿ, ಕಪನಿಂಬರಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸಿದ್ರಾಮಪ್ಪ ಬಿರಾದಾರ ಎಂಬ ಆರೋಪಗಳನ್ನು ಬಂಧಿಸಿದ್ದು, ಇದೀಗ ಅಶೋಕ ಚೌವ್ಹಾಣ ಬಂಧನದ ಮೂಲಕ ಜಿಲ್ಲೆಯಲ್ಲಿ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.

ಇದನ್ನೂ ಓದಿ : ಕೊರಗಜ್ಜನ ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಮೂಡಿದ ಬೇರು!: ಅಚ್ಚರಿ ಮೂಡಿಸಿದ ಘಟನೆ

Advertisement

Udayavani is now on Telegram. Click here to join our channel and stay updated with the latest news.

Next