Advertisement

Vijayapura: ಶಾರ್ಟ್ ಸರ್ಕ್ಯೂಟ್‌- ಮಂಗ ಸಾವು; ಸಾರ್ವಜನಿಕರಿಂದ ಮೆರವಣಿಗೆ, ಅಂತ್ಯಕ್ರಿಯೆ

08:49 PM Aug 06, 2024 | Kavyashree |

ವಿಜಯಪುರ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮಂಗವೊಂದು ಅಸುನೀಗಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಆ.6ರ ಮಂಗಳವಾರ ನಡೆದಿದೆ.

Advertisement

ನಾಲತವಾಡ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ಬಳಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮಂಗ ಮೃತಪಟ್ಟಿತ್ತು. ಸಾರ್ವಜನಿಕರು ಮಂಗನನ್ನು ಅಲಂಕರಿಸಿ, ಪೂಜಿಸಿದರು.

ನಂತರ ಅದ್ಧೂರಿಯಾಗಿ ಭಜರಂಗಿ ಹಾಡಿನ ಮ‌ೂಲಕ ಪಟ್ಟಣದಲ್ಲಿ ಮೆರವಣಿಗೆ ಮ‌ೂಲಕ ಪಟ್ಟಣದ ಕೃಷಿ ಇಲಾಖೆಯ ಕಚೇರಿ ಬಳಿಯಿರುವ ನೂತನ  ಶ್ರೀ ಶರಣ ವೀರೇಶ್ವರ ಸಮುದಾಯ ಭವನದ ಆವರಣದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next