Advertisement

Vijayapura: ಭಾರಿ ಮಳೆಗೆ ರಸ್ತೆಗಳು ಜಲಾವೃತ; ಕೊಚ್ಚಿಹೋದ ಸೇತುವೆ

01:26 PM Aug 22, 2024 | keerthan |

ವಿಜಯಪುರ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ವಿಜಯಪುರ ಜಿಲ್ಲೆಯಲ್ಲಿ ಹಳ್ಳಗಳು ತುಂಬಿ ಹರಿಯತೊಡಗಿದ್ದು, ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ.

Advertisement

ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಹೊರಭಾಗದಲ್ಲಿನ ಅಡವಿ ಹುಲಗಬಾಳ ಗ್ರಾಮದಿಂದ ಅಡವಿ ಹುಲಗಬಾಳ ತಾಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳದ ಸೇತುವೆ ಜಲಾವೃತವಾಗಿ ಕೊಚ್ಚಿಕೊಂಡು ಹೋಗಿದ್ದು, ಸಂಪರ್ಕ ಕಡಿತವಾಗಿದೆ.

ಅಡವಿ ಹುಲಗಬಾಳ ಗ್ರಾಮದಿಂದ ತಾಂಡಾ ಮಧ್ಯೆ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಈ‌ ಹಿಂದೆ ಎರಡು ಬಾರಿ ಕೊಚ್ಚಿ ಹೋಗಿದ್ದ, ಇದೀಗ ಮತ್ತೊಮ್ಮೆ ಸೇತುವೆ ನೀರು ಪಾಲಾಗಿದೆ.

content-img

ಕೊಲ್ಹಾರ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ಬಹುತೇಕ ಹಳ್ಳಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.

Advertisement

ಕೊಲ್ಹಾರ ತಾಲೂಕಿನ ರೋಣಿಹಾಳ ಹಳ್ಳದ ಮೇಲೆ ಮಳೆಯ ನೀರು ಹರಿಯಲು ಆರಂಭಿಸಿದ್ದು, ಅಪಾಯವನ್ನು ಲೆಕ್ಕಿಸದೆ ಹಳ್ಳದ ಸೇತುವೆ ಮೆಲೆಯೇ ಜನರ ಓಡಾಟ ನಡೆಸಿದ್ದಾರೆ.

ರೋಣಿಹಾಳ ಹಳ್ಳ ಮಾತ್ರವಲ್ಲದೆ ಗರಸಂಗಿ, ಆಸಂಗಿ ಹಳ್ಳಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಅಪಾಯದ ಮಧ್ಯೆಯೂ ಜನರು ಹಳ್ಳ ದಾಟಿಕೊಂಡು ಓಡಾಟ ನಡೆಸಿದ್ದಾರೆ.

ದ್ರಾಕ್ಷಿ ಬೆಳೆ ಹಾನಿ

ಜಿಲ್ಲೆಯಲ್ಲಿ ಸುರಿದ ಭಾತಿ ಮಳೆಗೆ ವಿಜಯಪುರ ತಾಲೂಕಿನ ಲೋಗಾಂವಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ನೆಲಕ್ಕೆ ಕುಸಿದು ಬೆಳೆ ಹಾನಿಯಾಗಿದೆ.

ರಾಜು ಹುನ್ನೂರ ಎಂಬ ರೈತರ ತೋಟದಲ್ಲಿ ದ್ರಾಕ್ಷಿ ಬೆಳೆ ಹಾಗೂ ಬೆಳೆಗೆ ಅಳವಡಿಸಿರುವ ಕಂಬಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆ ಭಾರಿ ಮಳೆಯ ಹೊಡೆತಕ್ಕೆ ನೆಲಕಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.