ವಿಜಯಪುರ: ಪರಸ್ಪರ ಸಂಬಂಧಿಗಳಾಗಿದ್ದರೂ ಧ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ರಾಜು ನ್ಯಾಮಗೊಂಡ ಎಂಬಾತನ ಮೇಲೆ ಶಿವು ಜಗದಾಳೆ ಎಂಬಾತ ಗುಂಡು ಹಾರಿಸಿದ್ದಾನೆ.
ಶಿವು ಜಗದಾಳೆ ಮೂರು ಸುತ್ತು ಗುಂಡು ಹಾರಿಸಿದ ಮಾಹಿತಿ ಲಭ್ಯವಾಗಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ರಾಜು ನ್ಯಾಮಗೊಂಡ ಎಂಬಾತನನ್ನು ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿ ಶಿವು ಜಗದಾಳೆ ಪರಾರಿಯಾಗಿದ್ದಾನೆ.
ಶಿವು ಜಗದಾಳೆ ಹಾಗೂ ರಾಜು ನ್ಯಾಮಗೊಂಡ ಇಬ್ವರೂ ಪರಸ್ಪರ ಸಂಬಂಧಿಗಳೇ ಆಗಿದ್ದರೂ ಕಾರಣಾಂತರದಿಂದ ಉಂಟಾದ ಮನಸ್ತಾಪದಿಂದ ಧ್ಷೇಷ ಬೆಳೆಸಿಕೊಂಡಿದ್ದರು.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ಕೊಲ್ಹಾರ ಠಾಣೆ ಪೊಲೀಸರು, ರೋಣಿಹಾಳ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ: Tragedy: ಹೋರಿ ತಿವಿದು ವ್ಯಕ್ತಿ ಮೃತ್ಯು… ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಘಟನೆ