Advertisement

Vijayapura: ಪೋಕ್ಸೋ ಆರೋಪಿಗೆ 5 ವರ್ಷ, ಗಾಂಜಾ ಬೆಳದವನಿಗೆ 3 ವರ್ಷ ಜೈಲು ಶಿಕ್ಷೆ

11:10 PM May 09, 2024 | Vishnudas Patil |

ವಿಜಯಪುರ : ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಮಾದಕ ವಸ್ತು ಗಾಂಜಾ ಬೆಳೆದ ಆರೋಪದಲ್ಲಿ ಎರಡು ಪ್ರತ್ಯೇಕ ನ್ಯಾಯಾಲಯಗಳು ಇಬ್ಬರು ಆರೋಪಿಗಳಿಗೆ ವಿವಿಧ ರೀತಿಯ ಕಠಿಣ ಜೈಲು ಶಿಕ್ಷೆ ವಿಧಿಸಿವೆ.

Advertisement

ಮೂರನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಿಲ್ಲೆಯ ವಿಶೇಷ ಪೋಕ್ಸೋ ನ್ಯಾಯಾಲಯ ಕೃತ್ಯ ಎಸಗಿದವನಿಗೆ 5 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ 10 ಸಾವಿರ ರೂ. ದಂಡ ಭರಿಸುವಂತೆಯೂ ಆದೇಶಿಸಿದೆ.

2023 ಜೂನ್ 21 ರಂದು ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 3ನೇ ತರಗತಿ ಓದುತ್ತಿದ್ದ 9 ವರ್ಷದ ವಿದ್ಯಾರ್ಥಿನಿ ಮೇಲೆ ಅದೇ ಗ್ರಾಮದ ಸುನಿಲ ಬಾಬು ರಾಠೋಡ ಎಂಬವ ಅತ್ಯಾಚಾರ ಎಸಗಿದ್ದ.

ಗುಡಿಯ ಪಕ್ಕದಲ್ಲಿ ಮೂತ್ರ ವಿಸರ್ಜನೆಗೆ ಹೋಗಿದ್ದ ಬಾಲಕಿಯನ್ನು ಪಕ್ಕದ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಬಾಲಕಿಯ ಮರ್ಮಾಂಗದಲ್ಲಿ ಸಮಸ್ಯೆ ಕಾಣಿಸಿಕೊಂಡುದನ್ನು ಗಮನಿಸಿದ ತಾಯಿ ವಿಷಯ ತಿಳಿದು, ದೇವರಹಿಪ್ಪರಗಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಳು.

ಸಿಪಿಐ ಆನಂದರಾವ್ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು. ಪ್ರಕರಣದ ವಾದ-ವಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ರಾಮ ನಾಯಕ ಆರೋಪಿ ವಿರುದ್ಧ ಕೃತ್ಯ ಸಾಬೀತಾದ ಕಾರಣ ಶಿಕ್ಷೆ ವಿಧಿಸಿದ್ದಾರೆ.

Advertisement

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಸುರೇಶಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಸೇಷ ಸರ್ಕಾರಿ ಅಭಿಯೋಜಜರಕಾದ ವಿ.ಜಿ/ ಹಗರಗುಂಡ ವಾದ ಮಂಡಿಸಿದ್ದರು.
ಗಾಂಜಾ ಬೆಳೆದವನಿಗೆ 3 ವರ್ಷ ಶಿಕ್ಷೆ : ಅಕ್ರಮವಾಗಿ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪದಲ್ಲಿ ಓರ್ವನಿಗೆ ನ್ಯಾಯಾಲಯ 3 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಜೈನಾಪುರ ಗ್ರಾಮದ ಸುರೇಶ ಶಿಕ್ಷೆಗೆ ಗುರಿಯಾದವರ. ಸುರೇಶ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದು ಸಂಗ್ರಹಿಸಿದ್ದ. 2019 ಮೇ 21 ರಂದು ಬಬಲೇಶ್ವರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ 12 ಕೆ.ಜಿ. ಹಸಿ ಗಾಂಜಾ, 360 ಗ್ರಾಂ., ಒಣ ಗಾಂಜಾ ವಶಕ್ಕೆ ಪಡೆದಿದ್ದರು.

ಸದರಿ ಪ್ರಕರಣದಲ್ಲಿ ತನಿಖೆ ನಡೆಸಿದ ಎಎಸೈ ಎಸ್.ಆರ್.ಹಿರೇಗಾಣ ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು. ಪ್ರಕರಣದಲ್ಲಿ ವಾದ-ವಿವಾದ ಆಲಿಸಿದ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ನಲವಡೆ ಇವರು ಗಾಂಜಾ ಬೆಳದು ಸಂಗ್ರಹಿಸಿ ಸುರೇಶಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪೃಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ್ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next